For the best experience, open
https://m.bcsuddi.com
on your mobile browser.
Advertisement

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಗಗನಕ್ಕೇರಿದ ಕೋಳಿ ಮಾಂಸ ದರ, ಕೆಜಿಗೆ 300 ರೂ.

10:48 AM Mar 21, 2024 IST | Bcsuddi
ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್   ಗಗನಕ್ಕೇರಿದ ಕೋಳಿ ಮಾಂಸ ದರ  ಕೆಜಿಗೆ 300 ರೂ
Advertisement

ಬೆಂಗಳೂರು : ಚಿಕನ್ ದರ ಭಾರಿ ಏರಿಕೆ ಪರಿಣಾಮ ಕೋಳಿ ಮಾಂಸ ಪ್ರಿಯರಿಗೆ ಶಾಕ್ ನೀಡಿದೆ. ಒಂದು ಕೆಜಿ ಕೋಳಿ ಮಾಂಸದ ದರ ರಾಜ್ಯದ ವಿವಿಧಡೆ 300 ರೂ. ತಲುಪಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಕೋಳಿ ಸಾಕಾಣೆದಾರರಿದ್ದು, ಪ್ರತಿವಾರ 80 ಲಕ್ಷ ಕೋಳಿ ಉತ್ಪಾದನೆ ಮಾಡಲಾಗುತ್ತದೆ. ಸುಮಾರು 1.7 ಕೋಟಿ ಕೆಜಿ ಕೋಳಿ ಮಾಂಸ ಉತ್ಪಾದನೆ ಆಗುತ್ತದೆ.

ಪ್ರತಿ ಕೆಜಿ ಕೋಳಿ ಉತ್ಪಾದನೆಗೆ ಈ ಹಿಂದೆ 60 ರಿಂದ 70 ರೂ. ವೆಚ್ಚ ಆಗುತ್ತಿತ್ತು. ಈಗ 100 ರೂಪಾಯಿವರೆಗೆ ಖರ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆಯ ಪರಿಣಾಮ ದರ ಏರಿಕೆಯಾಗಿ 300 ರೂಪಾಯಿ ಗಡಿ ತಲುಪಿದೆ. ರಾಜ್ಯದಲ್ಲಿ ಶೇಕಡ 30ರಷ್ಟು ಕೋಳಿ ಶೆಡ್ ಗಳು ಖಾಲಿಯಾಗಿವೆ. ಕೋಳಿ ಸಾಕಾಣೆದಾರರು, ಕಂಪನಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ವಿದ್ಯುತ್ ದರ ಕೂಡ ಹೆಚ್ಚಳ ಆಗಿದೆ. ಬಿಸಿಲು ಹೆಚ್ಚಾದ ಪರಿಣಾಮ ಕೋಳಿ ಮಾಂಸ ಉತ್ಪಾದನೆ ವಿಳಂಬವಾಗುತ್ತಿದೆ. ಹೊರ ರಾಜ್ಯಗಳಲ್ಲೂ ಕೂಡ ಕೋಳಿ ಉತ್ಪಾದನೆ ಕುಸಿತವಾಗಿ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಚಿಕನ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement
Author Image

Advertisement