For the best experience, open
https://m.bcsuddi.com
on your mobile browser.
Advertisement

'ಗ್ರ್ಯಾಮಿ ಪ್ರಶಸ್ತಿಯಲ್ಲಿ ಮಿಂಚಿದ ಭಾರತ': ಶಂಕರ್ ಮಹಾದೇವನ್, ಜಾಕಿರ್ ಹುಸೇನ್‌ಗೆ ಅವಾರ್ಡ್

10:10 AM Feb 05, 2024 IST | Bcsuddi
 ಗ್ರ್ಯಾಮಿ ಪ್ರಶಸ್ತಿಯಲ್ಲಿ ಮಿಂಚಿದ ಭಾರತ   ಶಂಕರ್ ಮಹಾದೇವನ್  ಜಾಕಿರ್ ಹುಸೇನ್‌ಗೆ ಅವಾರ್ಡ್
Advertisement

ಕ್ಯಾಲಿಫೋರ್ನಿಯಾ: ಭಾರತೀಯ ಸಂಗೀತ ಲೋಕಕ್ಕೆ ಇಂದು ಹೆಮ್ಮೆಯ ದಿನವಾಗಿದ್ದು, ಸೋಮವಾರ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆದ 66ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ ್ ಸಮಾರಂಭದಲ್ಲಿ ಭಾರತೀಯ ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಮತ್ತು ಜಾಕಿರ್ ಹುಸೇನ್ ಅವರ ಫ್ಯೂಷನ್ ಬ್ಯಾಂಡ್ "ದಿಸ್ ಮೂಮೆಂಟ್ , ಶಕ್ತಿ"ಯು 'ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ' ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸಂಗೀತಲೋಕದ ದಿಗ್ಗಜರೆಣಿಕೊಂಡ ಸುಸಾನಾ ಬಾಕಾ, ಬೊಕಾಂಟೆ, ಬರ್ನಾ ಬಾಯ್ ಮತ್ತು ಡೇವಿಡೊ ಅವರಂತಹ ಮಹಾನ್ ಕಲಾವಿದರಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದ "ಶಕ್ತಿ" ಗ್ರ್ಯಾಮಿಯಲ್ಲಿ ಕೊನೆಗೂ ಜಯಶಾಲಿಯಾಗಿ ಹೊರಹೊಮ್ಮಿತು.

ಕಳೆದ ವರ್ಷ ಜೂನ್ 30 ರಂದು ಬಿಡುಗಡೆಯಾದ ಆಲ್ಬಂ "ದಿಸ್ ಮೂಮೆಂಟ್ ಶಕ್ತಿ" ಎಂಟು ಹಾಡುಗಳನ್ನು ಒಳಗೊಂಡಿದೆ. ಇದರಲ್ಲಿ ಮೆಕ್‌ಲಾಫ್ಲಿನ್ (ಗಿಟಾರ್, ಗಿಟಾರ್ ಸಿಂಥ್), ಜಾಕಿರ್ ಹುಸೇನ್ (ತಬಲಾ), ಶಂಕರ್ ಮಹದೇವನ್ (ಗಾಯನ), ವಿ ಸೆಲ್ವಗಣೇಶ್ (ತಾಳವಾದ್ಯ ವಾದಕ), ಮತ್ತು ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ) ಅವರು ಕೆಲಸಮಾಡಿಸಿಕೊಂಡಿದ್ದಾರೆ. ಇದಲ್ಲದೇ ಜಾಕಿರ್ ಹುಸೇನ್ ಅವರು ಬೆಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್ ಅವರೊಂದಿಗೆ 'ಪಾಷ್ಟೋ' ಗೆ ನೀಡಿದ ಕೊಡುಗೆಗಾಗಿ 'Best Global Music Performance’' ಗ್ರ್ಯಾಮಿಯನ್ನು ಪಡೆದುಕೊಂಡಿದ್ದಾರೆ. , ರಾಕೇಶ್ ಚೌರಾಸಿಯಾ ಕೊಳಲು ವಾದಕ. ಹುಸೇನ್ ಮೂರು ಗ್ರ್ಯಾಮಿಗಳನ್ನು ಪಡೆದರೆ, ಚೌರಾಸಿಯಾ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Advertisement

Author Image

Advertisement