ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗ್ರಾಹಕರೇ ಎಚ್ಚರ: ನಿಷೇಧಿತ ಚೀನಿ ಬೆಳ್ಳುಳ್ಳಿ ಹಾವಳಿ..!

12:31 PM Oct 01, 2024 IST | BC Suddi
Advertisement

ಉಡುಪಿ: ಕೆಲವು ದಿನಗಳಿಂದ ನಿಷೇಧಿತ ಚೀನೀ ಬೆಳ್ಳುಳ್ಳಿ ಹಾವಳಿ ಹೆಚ್ಚುತ್ತಿದೆ. ಉಡುಪಿ ಎಪಿಎಂಸಿಯಲ್ಲಿಯೂ ಚೀನೀ ಬೆಳ್ಳುಳ್ಳಿ ಪತ್ತೆಯಾಗಿದೆ. ಇಲ್ಲಿನ ಆದಿಉಡುಪಿ ಎಪಿಎಂಸಿ ಗೋದಾಮಿನಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಸಂಗ್ರಹಿಸಿಡಲಾಗಿತ್ತು. ಖಚಿತ ಮಾಹಿತಿ ಪಡೆದ ಉಡುಪಿ ನಗರಸಭೆ ಮುಖ್ಯ ಆಯುಕ್ತ ರಾಯಪ್ಪ ದಿಢೀರ್ ದಾಳಿ ನಡೆಸಿ 5 ಕ್ವಿಂಟಾಲ್ ಬೆಳ್ಳುಳ್ಳಿಯನ್ನು ಪತ್ತೆ ಮಾಡಿದ್ದಾರೆ. ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು. ಚೀನಿ ಬೆಳ್ಳುಳ್ಳಿ ಮಾರಾಟದ ವಿರುದ್ಧಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಮಾರಕ ರೋಗಗಳಿಗೆ ಕಾರಣವಾಗುವ ಚೀನಿ ಬೆಳ್ಳುಳ್ಳಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಉಡುಪಿ ನಗರಸಭೆ ಪೌರಾಯುಕ್ತರು ಮಾತನಾಡಿ, ಆಹಾರ ಪದಾರ್ಥಗಳಿಗೆ ರಾಸಾಯನಿಕ ಸಿಂಪಡಣೆಯಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ.ಎಪಿಎಂಸಿಯಲ್ಲಿ ನಿಷೇಧಿತ ಬೆಳ್ಳುಳ್ಳಿ ಮಾರಾಟದ ಬಗ್ಗೆ ದೂರುಗಳಿದ್ದವು. ದೂರಿನ ಅನ್ವಯ ದಾಳಿ ನಡೆಸಿದ್ದೇವೆ. ಇಂತಹ ಕೃತ್ಯ ಎಸಗುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Advertisement

Advertisement
Next Article