For the best experience, open
https://m.bcsuddi.com
on your mobile browser.
Advertisement

ಗ್ಯಾಂಗ್‌ಸ್ಟರ್ ಲಾರೆನ್ಸ್ ಹೆಸರಿನಲ್ಲಿ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ತರಕಾರಿ ವ್ಯಾಪಾರಿ ಅರೆಸ್ಟ್..!

10:07 AM Oct 24, 2024 IST | BC Suddi
ಗ್ಯಾಂಗ್‌ಸ್ಟರ್ ಲಾರೆನ್ಸ್ ಹೆಸರಿನಲ್ಲಿ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ತರಕಾರಿ ವ್ಯಾಪಾರಿ ಅರೆಸ್ಟ್
Advertisement

ಮುಂಬೈ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ತರಕಾರಿ ಮಾರಾಟಗಾರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು 24 ವರ್ಷದ ಜಮ್ಶೆಡ್‌ಪುರ ನಿವಾಸಿ ಶೇಖ್ ಹುಸೇನ್ ಶೇಖ್ ಮೌಸಿನ್ ಎಂದು ಗುರುತಿಸಲಾಗಿದೆ. ಈತ ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಬೆದರಿಕೆಯನ್ನು ಕಳುಹಿಸಿದ್ದ. ಆದರೆ ನಂತರ "ಕ್ಷಮೆಯಾಚನೆ" ಸಂದೇಶ ಕೂಡ ಕಳುಹಿಸಿದ್ದ.

Advertisement
Author Image

Advertisement