ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗುವಾಹಟಿಗೆ ಹೋಗುತ್ತಿದ್ದ ಇಂಡಿಗೋ ವಿಮಾನ ಢಾಕಾದಲ್ಲಿ ತುರ್ತು ಭೂಸ್ಪರ್ಶ

12:31 PM Jan 13, 2024 IST | Bcsuddi
Advertisement

ಮುಂಬೈ: ಭಾರತದಿಂದ ಪ್ರಯಾಣಿಕರನ್ನು ಮುಂಬೈನಿಂದ ಗುವಾಹಟಿಗೆ ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನ ಸುತ್ತಲು ಮಂಜು ಮುಸುಕಿದ್ದರಿಂದ ಕಾರಣ ಬ್ಲಾಂಗಾ ದೇಶದ ರಾಜಧಾನಿ ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಮಹಾರಾಷ್ಟ್ರ ಯುವ ಕಾಂಗ್ರೆಸ್ ನ ಸೂರಜ್ ಸಿಂಗ್ ಠಾಕೂರ್ ಹೇಳಿದ್ದಾರೆ.

Advertisement

ಈ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಸೂರಜ್ ಸಿಂಗ್ ಠಾಕೂರ್ ಕೂಡ ಇದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿದ ಅವರು, ನಾನು ಮುಂಬೈನಿಂದ ಗುವಾಹಟಿಗೆ ಇಂಡಿಗೊ 6E–5319 ವಿಮಾನದಲ್ಲಿ ತೆರಳುತ್ತಿದ್ದೆ. ದಟ್ಟ ಮಂಜಿನ ಕಾರಣದಿಂದ ಈ ವಿಮಾನ ಗುವಾಹಟಿಯಲ್ಲಿ ಇಳಿಯಲು ಸಾಧ್ಯವಾಗದೇ ಢಾಕಾದಲ್ಲಿ ಇಳಿದಿದ್ದು ಮಾತ್ರವಲ್ಲದೇ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪಾಸ್ಪೋರ್ಟ್ ಇಲ್ಲದೆ ಅಂತರರಾಷ್ಟ್ರೀಯ ಗಡಿ ದಾಟಿದ್ದೇವೆ.

ಇನ್ನು ನಾವು ಸುಮಾರು 9 ಗಂಟೆಗಳ ಕಾಲ ವಿಮಾನದೊಳಗೆ ಸಿಲುಕಿಕೊಂಡಿದ್ದೇವೆ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಬಂಧ ಪಟ್ಟ ಅಧಿಕಾರಿಗಳು, ವಿಮಾನವು ದಟ್ಟವಾದ ಮಂಜಿನಿಂದಾಗಿ ಗುವಾಹಟಿಯಲ್ಲಿ ಇಳಿಯಲು ಸಾಧ್ಯವಾಗದೇ ಅಂತರರಾಷ್ಟ್ರೀಯ ಗಡಿ ದಾಟಿದೆ. ಈಗ ಯಾವ ಪ್ರಯಾಣಿಕರಲ್ಲೂ ಪಾಸ್ ಪೋರ್ಟ್ ಇಲ್ಲ. ಈ ಕಾರಣದಿಂದ ಪ್ರಯಾಣಿಕರನ್ನು ವಿಮಾಣ ನಿಲ್ದಾಣದಲ್ಲಿ ವಿಮಾನದೊಳಗೆ ಕುಳಿತುಕೊಳ್ಳುವಂತೆ ಹೇಳಲಾಗಿದೆ.

ಆದರೆ ಅದಷ್ಟು ಬೇಗ ಢಾಕದಿಂದ ವಿಮಾನವನ್ನು ನಿರ್ವಹಿಸುವ ಪರ್ಯಾಯ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗುತ್ತದೆ. ಇದರೊಂದಿಗೆ ಪ್ರಯಾಣಿಕರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ.

Advertisement
Next Article