ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗುಪ್ತಚರ ವರದಿಯ ಮೇಲೆ ವಿಶ್ವಾಸ - ರಾಜ್ಯದಲ್ಲಿ ಡಬಲ್ ಡಿಜಿಟ್ ದಾಟುವ ನಂಬಿಕೆಯಲ್ಲಿರುವ ಕಾಂಗ್ರೆಸ್‌

05:15 PM Jun 02, 2024 IST | Bcsuddi
Advertisement

ಬೆಂಗಳೂರು: 2024ರ ಲೋಕಸಭಾ ಚುನಾವಣೆಯ ಕೊನೆಯ ಹಾಗೂ ಏಳನೇ ಹಂತದ ಮತದಾನ ನಿನ್ನೆಯಷ್ಟೇ ಮುಗಿದಿದ್ದು, ಈ ಬೆನ್ನಲ್ಲೇ ಹೊರಬಿದ್ದ ಚುನಾವನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವು ಜಯ ಸಾಧಿಸುವ ಸಾಧ್ಯತೆ ಇದೆ.

Advertisement

ಅದರಲ್ಲೂ ಕರ್ನಾಟಕದ ವಿಚಾರಕ್ಕೆ ಬಂದರೆ ಕಾಂಗ್ರೆಸ್‌ ಪಕ್ಷವು ಎರಡು ಅಂಕಿ ದಾಟುವುದಿಲ್ಲ ಎನ್ನಲಾಗುತ್ತಿದೆ. ಆದರೆ ಗುಪ್ತಚರ ವರದಿಯ ಮೇಲೆ ವಿಶ್ವಾಸ ಇಟ್ಟಿರುವ ಕಾಂಗ್ರೆಸ್‌ ಈ ಬಾರಿ ಡಬಲ್ ಡಿಜಿಟ್ ದಾಟುವ ನಂಬಿಕೆಯಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ​ 5ರಿಂದ 8ಸ್ಥಾನಗಳು ಮಾತ್ರ ಲಭಿಸಲಿವೆ ಎಂದು ಎಕ್ಸಿಟ್​ ಪೋಲ್​ ಹೇಳಿವೆ. ಆದ್ರೆ, ರಾಜ್ಯ ಕಾಂಗ್ರೆಸ್ ನಾಯಕರು ಅದ್ಯಾವುದನ್ನು ತಲೆಕೆಡಿಸಿಕೊಳ್ಳುತ್ತಿಲ್ಲ.

ಎಕ್ಸಿಟ್​ ಪೋಲ್ ಬದಲಿಗೆ ರಾಜ್ಯ ಗುಪ್ತಚರ ಇಲಾಖೆಯ ಆಂತರಿಕ ವರದಿ ಮೇಲೆ ವಿಶ್ವಾಸ ಇಟ್ಟಿದ್ದು, ಕನಿಷ್ಠ 10-12 ಸ್ಥಾನ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಆಂತರಿಕ ವರದಿಯಲ್ಲೂ ಕಾಂಗ್ರೆಸ್ ಡಬಲ್ ಡಿಜಿಟ್ ದಾಟುವ ಮಾಹಿತಿ ಇದೆ. ಕನಿಷ್ಠ ಏನಿಲ್ಲ ಅಂದರೂ 13 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂಬ ವರದಿ ನೀಡಿದೆ. ಇನ್ನು ಗ್ಯಾರಂಟಿಗಳು ಕೈ ಹಿಡಿದರೆ 14 ರಿಂದ15 ಸ್ಥಾನ ದಾಟಬಹುದು ಎಂಬ ವರದಿ ಸಹ ಇದೆ.

ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು, ಆಂತರಿಕ ವರದಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಎಕ್ಸಿಟ್ ಪೋಲ್‌ ಫಲಿತಾಂಶದಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಭರ್ಜರಿ ಗೆಲುವು ಸಿಗಲಿದೆ ಎಂದು ಹೇಳಿದ್ದವು. ಆದರೆ ಅಂತಿಮ ಫಲಿತಾಂಶದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಏರಿತು. ಹೀಗಾಗಿ ಕಾಂಗ್ರೆಸ್‌ ನಾಯಕರು ರಾಜ್ಯ ಗುಪ್ತಚರ ಇಲಾಖೆಯ ಆಂತರಿಕ ವರದಿ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ.

Advertisement
Next Article