ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗರಿಕೆ ಹುಲ್ಲಿನ ಆರೋಗ್ಯ ಪ್ರಯೋಜನ ಗೊತ್ತೇ..?

09:01 AM Oct 08, 2024 IST | BC Suddi
Advertisement

ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡಿರುವ ಗರಿಕೆ ಹುಲ್ಲು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಉಪಯುಕ್ತವಾಗಿದೆ. ಆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಮನೆಯಂಗಳದಲ್ಲಿ ಹುಲ್ಲಿನಂತೆ ರಾಶಿ ರಾಶಿ ಬೆಳೆಯುವ ದೂರ್ವೆ ಅಥವಾ ಗರಿಕೆ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಸ್ಥಾನ ಪಡೆದಿದೆ. ದೇವರ ಪೂಜೆಯಲ್ಲಿ ಅಗ್ರಗಣ್ಯವಾಗಿರುವ ದೂರ್ವೆ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

Advertisement

ನೆಲದ ಮೇಲೆ ಹುಲ್ಲಿನಂತೆ ಹಸಿರು ಬಣ್ಣದಲ್ಲಿ ಹರಡಿಕೊಂಡಿರುವ ಗರಿಕೆ ಹುಲ್ಲುಗಳ ಬೇರು ಎಲೆ, ಕಾಂಡವೂ ಎಲ್ಲವೂ ಭರಪೂರ ಆರೋಗ್ಯ ಗುಣಗಳನ್ನು ಹೊಂದಿವೆ. ದೇಹದಲ್ಲಿ ರೋಗ ನಿರೊಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಜ್ವರ, ಮೈಕೈ ನೋವು ಎಲ್ಲದಕ್ಕೂ ಪರಿಣಾಮಕಾರಿ ಮನೆಮದ್ದಾಗಿದೆ. ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಗರಿಕೆ ಹುಲ್ಲು ಪರಿಹಾರ ನೀಡುತ್ತದೆ ಎನ್ನುವ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.

ಋತುಮಾನದ ಜ್ವರಕ್ಕೆ ರಾಮಬಾಣ ಹುಲ್ಲಿನಂತೆ ಕಾಣುವ ಗರಿಕೆ ಹುಲ್ಲು : ಕೆಲವೇ ಗಂಟೆಗಳಲ್ಲಿ ಜ್ವರವನ್ನು ನಿವಾರಿಸಿವ ಗುಣವನ್ನು ಹೊಂದಿದೆ. ದೂರ್ವೆ ಕಷಾಯದ ಸೇವನೆಯಿಂದ ದೇಹದಲ್ಲಿರುವ ಜ್ವರದ ವೈರಸ್‌ ನಾಶವಾಗಿ ದೇಹ ಸುಸ್ಥಿತಿಗೆ ಬರುತ್ತದೆ. ದೂರ್ವೆಯನ್ನು ಕಿತ್ತು ತಂದು ನೀರಿನಲ್ಲಿ ಸ್ವಚ್ಛಗೊಳಿಸಿ. ನಂತರ ಅದನ್ನು 2 ಕಪ್‌ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಅದು ರಸವನ್ನು ಬಿಟ್ಟ ಬಳಿಕ ಅದನ್ನು ಸೋಸಿ ಅದಕ್ಕೆ ಚಿಟಿಕೆ ಸಕ್ಕರೆ ಹಾಕಿ ದಿನಕ್ಕೆ 3 ರಿಂದ 4 ನಾಲ್ಕು ಬಾರಿ ಸೇವಿಸಿ. ಇದು ಜ್ವರವನ್ನು ನಿಯಂತ್ರಣಕ್ಕೆ ತರುತ್ತದೆ.​ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ : ಮೂತ್ರನಾಳದ ಸೋಂಕು, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳಿಗೆ ಗರಿಕೆ ಪರಿಹಾರ ನೀಡುತ್ತದೆ. ಗರಿಕೆಯ ದಂಟು, ಎಲೆಯನ್ನು ತಂದು ಜಜ್ಜಿ ರಸವನ್ನು ತೆಗೆದು ಅದಕ್ಕೆ ಲಿಂಬುರಸ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಸರಿಯಾಗುತ್ತದೆ. ಗರಿಕೆಯ ರಸದ ಸೇವನೆಯಿಂದ ರಕ್ತ ಹೀನತೆ, ಸುಸ್ತು, ನಿಶ್ಯಕ್ತಿ ಕೂಡ ದೂರವಾಗುತ್ತದೆ.

ಹೀಗಾಗಿ ದಿನಕ್ಕೆ ಒಂದು ಬಾರಿಯಾದರೂ ಗರಿಕೆಯ ರಸ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.​ಮಧುಮೇಹಕ್ಕೆ ಮದ್ದು : ಗರಿಕೆ ಹುಲ್ಲಿನ ರಸದ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಮಧುಮೇಹಕ್ಕೆ ಬೆಸ್ಟ್ ಮದ್ದಾಗಿದೆ. ಮಧುಮೇಹ ಇರುವವರು ಗರಕೆಯ ರಸವನ್ನು ಸೇವಿಸುತ್ತ ಬಂದರೆ ಮಧುಮೇಹವನ್ನು ತಡೆಗಟ್ಟಬಹುದಾಗಿದೆ. ಇದು ಸುಲಭವಾಗಿ ಹಾಗೂ ನೈಸರ್ಗಿಕವಾಗಿ ಸಿಗುವ ಮೂಲಿಕೆಯಾಗಿದ್ದರಿಂದ ಬಳಕೆಯೂ ಸುಲಭವಾಗಿದೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ : ಗರಿಕೆಯ ರಸವು ಸೈನೊಡಾನ್ ಡಾಕ್ಟಿಲಾನ್ ಪ್ರೋಟೀನ್ ಫ್ರಾಕ್ಷನ್ಸ್ ಅಥವಾ CDPF ಎನ್ನುವ ಅಂಶವನ್ನು ಹೊಂದಿರುತ್ತದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುವ ಪ್ರೋಟೀನ್ ಅಂಶವಾಗಿದೆ.

ಇದರ ಜೊತೆಗೆ, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ ಮತ್ತು ಸಿಗಳಿಂದ ಕೂಡಿದೆ, ಇದು ಸ್ವತಂತ್ರ ರಾಡಿಕಲ್‌ಗಳ ಹಾನಿಯನ್ನು ನಿವಾರಿಸುತ್ತದೆ, ದೀರ್ಘಕಾಲದ ಉರಿಯೂತವನ್ನು ತಪ್ಪಿಸುತ್ತದೆ. ಈ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

Advertisement
Next Article