ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗಣೇಶ ಚತುರ್ಥಿ ಹಬ್ಬಕ್ಕೆ ಮೋದಕ ಮಾಡುವ ವಿಧಾನ

09:01 AM Sep 05, 2024 IST | BC Suddi
Advertisement

ಗಣಪನಿಗೆ ಇಷ್ಟವಾಗುವ ತಿಂಡಿಗಳಲ್ಲಿ ಮೋದಕವೂ ಒಂದು. ಗಣೇಶನನ್ನು ಮೋದಕ ಪ್ರಿಯ ಎಂದು ಕೂಡ ಕರೆಯುತ್ತಾರೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ

Advertisement

ಬೇಕಾಗುವ ಸಾಮಾಗ್ರಿಗಳು
1. ಮೈದಾ ಹಿಟ್ಟು – 1 ಕಪ್
2. ಚಿರೋಟಿ ರವೆ – 1/4 ಕಪ್
3. ಉಪ್ಪು – ಚಿಟಿಕೆ
4. ಬೆಲ್ಲ – 1 ಅಚ್ಚು
5. ಕೊಬ್ಬರಿ ತುರಿ – 1 ಕಪ್
6. ಏಲಕ್ಕಿ ಪುಡಿ
7. ಗಸಗಸೆ – 1 ಚಮಚ
8. ಎಳ್ಳು -ಸ್ವಲ್ಪ
9. ಗೋಡಂಬಿ, ಬಾದಾಮಿ – 3-4 ಚಮಚ
1. ಎಣ್ಣೆ – ಕರಿಯಲು
ಮಾಡುವ ವಿಧಾನ
* ಮೊದಲಿಗೆ ಒಂದು ಬೌಲ್‍ಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
* ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
* ಊರ್ಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
* ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಊರ್ಣ ಸೇರಿಸಿ ಮಧ್ಯಕ್ಕೆ ಮಡಚಿ
* ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಊರ್ಣ ಆಚೆ ಬಾರದಂತೆ ನೋಡಿಕೊಳ್ಳಿ.
* ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article