ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

-ಗಜೇಶ ಮಸಣಯ್ಯ ಅವರ ವಚನ ……

07:07 AM Mar 18, 2024 IST | Bcsuddi
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

Advertisement

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಭಕ್ತನ ಮಠಕ್ಕೆ ಜಂಗಮ ಬಂದು,

ಆ ಭಕ್ತ ಮಾಡಿದಂತೆ ಭಕ್ತಿಯ ಮಾಡಿಸಿಕೊಂಡು,

ಕ್ಷಮಿಸಬಲ್ಲಡೆ ಜಂಗಮ;

ಆ ಕ್ಷಮೆಯೊಳಗೆ ಮಗ್ನನಾಗಬಲ್ಲಡೆ ಭಕ್ತ.

ಉಪಾಧಿಯಾಗಿ ಹೇಳಿ ಮಾಡಿಸಿಕೊಂಬನ್ನಬರ ಭೂತಪ್ರಾಣಿ:

ಬಂದ ಪರಿಯಲ್ಲಿ ಪರಿಣಾಮಿಸಬಲ್ಲಡೆ ಲಿಂಗಪ್ರಾಣಿ.

ಬೇಡಿದಲ್ಲದೆ ಮಾಡೇನೆಂಬೆನ್ನಕ್ಕರ ಫಲದಾಯಕ;

ಬಂದ ಜಂಗಮದ ಇಂಗಿತಾಕಾರವರಿದು

ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತನೆಂಬೆನು;

ಬೇಡದ ಮುನ್ನವೆ ಮಾಡುವ ಭಕ್ತನು,

ಬೇಡದೆ ಮಾಡಿಸಿಕೊಂಬ ಜಂಗಮವು,

ಇಂತೀ ಎರಡರ ಸಮ್ಮೇಳ ಸನ್ನಿಧಿಯಲ್ಲಿರ್ದುನಾನು ಸುಖಿಯಾದೆನು ಕಾಣಾ ಮಹಾಲಿಂಗ ಗಜೇಶ್ವರಾ.

 

-ಗಜೇಶ ಮಸಣಯ್ಯ

Tags :
--- - ಗಜೇಶ ಮಸಣಯ್ಯ  ಅವರ ವಚನ …!
Advertisement
Next Article