ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗಗನಸಖಿಯರು ಯಾವಾಗಲೂ ಹೈಹೀಲ್ಸ್ ಹಾಕುತ್ತಾರೆ ಗೊತ್ತಾ..?

05:52 PM Oct 27, 2024 IST | BC Suddi
Advertisement

ಮುಂಬೈ: ಫ್ಲೈಟ್ ಅಟೆಂಡೆಂಟ್ಸ್‌ಗಳು ಯಾವಾಗ್ಲೂ ಒಂದೇ ರೀತಿಯ ಡ್ರೆಸ್‌ಗಳಲ್ಲಿ, ಮೇಕಪ್‌ಗಳಲ್ಲಿ ಕಾಣುತ್ತಿರುತ್ತಾರೆ. ಆದ್ರೆ ಚಪ್ಪಲಿ, ಶೂ ಹಾಕದೆ ಹೈ ಹೀಲ್ಸ್ ಮಾತ್ರ ಹಾಕಿರುತ್ತಾರೆ. ಯಾಕೆ ಎತ್ತರದ ಹುಡುಗಿಯರೂ ಹೈ ಹೀಲ್ಸ್ ಹಾಕಿಕೊಳ್ತಾರೆಂದು ಎಂದಾದ್ರೂ ಯೋಚಿಸಿದ್ದೀರಾ? ಇದು ಆಕಸ್ಮಿಕವಲ್ಲ. ಇದರ ಹಿಂದೆ ಒಂದು ಕಥೆ ಇದೆ.

Advertisement

ಫ್ಲೈಟ್ ಅಟೆಂಡೆಂಟ್ಸ್‌ಗಳು ಅಥವಾ ಗಗನ ಸಖಿಯರು ಹೈಹೀಲ್ಸ್ ಹಾಕುವ ಪದ್ಧತಿ 1960 ಮತ್ತು 70ರ ದಶಕದಲ್ಲಿ ಆರಂಭವಾಯಿತು. ಆ ಕಾಲದಲ್ಲಿ ಫೇಮಸ್ ಆಗಿದ್ದ ಪೆಸಿಫಿಕ್ ಸೌತ್‌ವೆಸ್ಟ್ ಏರ್‌ಲೈನ್ಸ್‌ಗಳು ಈ ಪದ್ಧತಿಯನ್ನು ಬಳಕೆಗೆ ತಂದಿದೆ. ಈ ಕಂಪನಿಗಳು ಶುರು ಮಾಡಿದ ಡ್ರೆಸ್‌ನಲ್ಲಿ ಮಿನಿ ಸ್ಕರ್ಟ್‌ಗಳು ಕೂಡ ಇದ್ದವು.

ಆಗಿನ ಕಾಲದಲ್ಲಿ ಫ್ಲೈಟ್‌ನಲ್ಲಿ ಹೆಚ್ಚಾಗಿ ಗಂಡಸರೇ ಸಂಚಾರ ಮಾಡುತ್ತಿದ್ದರು. ಅವರನ್ನು ಆಕರ್ಷಿಸುವ ಥರಹ ಒಂದು ರೀತಿಯ ಇಮೇಜ್ ಕ್ರಿಯೇಟ್ ಮಾಡೋದೇ ಆಗಿನ ಫ್ಲೈಟ್ ಕಂಪೆನಿಗಳ ಉದ್ದೇಶವಾಗಿತ್ತು. ಈ ಐಡಿಯಾ ಸಕ್ಸೆಸ್ ಕೂಡ ಆಯಿತು. ಹುಡುಗಿಯರನ್ನು ಇಟ್ಕೊಂಡು ತೋರಿಸಿದ ಆಕರ್ಷಣೆಯಿಂದಲೇ ಕಸ್ಟಮರ್ಸ್ ಬಂದ್ರಾ? ಅನ್ನೋದರ ಬಗ್ಗೆಯೇ ಈಗ ಚರ್ಚೆಗಳು ನಡೆಯುತ್ತಿದೆ.

ಹೈ ಹೀಲ್ಸ್ ಹಾಕೋದು ಸ್ಟೈಲ್ ಅಷ್ಟೇ ಅಲ್ಲ. ಫ್ಲೈಟ್ ಅಟೆಂಡೆಂಟ್ಸ್‌ಗಳ ಪ್ರೊಫೆಷನಲ್ ಲುಕ್‌ಗೆ ಇನ್ನೂ ಚೆಂದ ಮತ್ತು ಪರ್ಸನಾಲಿಟಿ ಕೊಡುತ್ತದೆ. ಇದರಿಂದ ಅವರ ಎತ್ತರ, ನೀಟು ಇವುಗಳ ಮೇಲೆ ಒಂದು ಚೆಂದದ ಭ್ರಮೆ ಉಂಟಾಗುತ್ತೆ.

ಈ ಫೀಲ್ಡ್‌ನಲ್ಲಿ, ಪ್ರಯಾಣಿಕರ ನಂಬಿಕೆ ಹೆಚ್ಚಿಸೋದು ಮುಖ್ಯ. ಅದಕ್ಕೆ ಅವರು ಕ್ಲಿಯರ್ ಆಗಿ, ಡಿಫರೆಂಟ್ ಆಗಿ, ಶಾರ್ಪ್ ಆಗಿ ಇರೋದು ಮುಖ್ಯ. ಆದ್ರೆ ನಿಜವಾಗ್ಲೂ ಹೈ ಹೀಲ್ಸ್ ಹಾಕಿದ್ರೆ ತುಂಬಾ ಹೊತ್ತು ನಿಲ್ಲೋದು ಕಷ್ಟ. ಇದು ಫ್ಲೈಟ್ ಅಟೆಂಡೆಂಟ್ಸ್‌ಗೆ ತೊಂದರೆ ಕೊಡುತ್ತೆ ಅಂತ ಈಗ ಬೇರೆ ಬೇರೆ ಫ್ಲೈಟ್ ಕಂಪನಿಗಳು ಅರ್ಥ ಮಾಡ್ಕೊಂಡಿವೆ. ಇದರಿಂದ ಕೆಲವು ಕಂಪನಿಗಳು ತಮ್ಮ ಸ್ಟಾಫ್‌ಗೆ ಸ್ಪೆಷಲ್ ಆಫರ್ ಕೊಟ್ಟಿವೆ. ಹೈ ಹೀಲ್ಸ್ ಹಾಕೋದು ಕಂಪಲ್ಸರಿ ಅಲ್ಲ ಅಂತ ಹೇಳಿವೆ.

ಏರ್ ಟ್ರಾವೆಲ್ ಅನ್ನೋ ಚೈನಾ ಫ್ಲೈಟ್ ಕಂಪನಿ, ಇತ್ತೀಚೆಗೆ ತನ್ನ ಫ್ಲೈಟ್ ಅಟೆಂಡೆಂಟ್ಸ್‌ಗೆ ಹೈ ಹೀಲ್ಸ್ ಹಾಕದೆ ಇರಲು ಒಪ್ಪಿಗೆ ನೀಡಿದೆ. ಬೇರೆ ಬೇರೆ ಕಂಪನಿಗಳು ಕೂಡ ಇದೇ ತರ ಅವರಿಗೆ ಸ್ಪೆಷಲ್ ಆಫರ್ ಕೊಟ್ಟಿವೆ. ಈ ಪದ್ಧತಿ ಎಲ್ಲಾ ಕಡೆ ಹರಡಿದ್ರೆ ತುಂಬಾ ಫ್ಲೈಟ್ ಅಟೆಂಡೆಂಟ್ಸ್‌ಗಳ ಕಾಲುಗಳು ಸ್ವಲ್ಪ ರೆಸ್ಟ್ ಪಡೆಯುತ್ತೆ ಎಂಬುದು ಹಲವರ ಅಭಿಪ್ರಾಯ

Advertisement
Next Article