ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗಗನಚುಕ್ಕಿ , ಭರಚುಕ್ಕಿ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಶೀಘ್ರವೇ ರೋಪ್ ವೇ

12:01 PM Aug 13, 2024 IST | BC Suddi
Advertisement

ಬೆಂಗಳೂರು : ಜಲಪಾತದ ವೈಮಾನಿಕ ನೋಟವನ್ನು ಕಣ್ತುಂಬಿಕೊಳ್ಳಲು ಶೀಘ್ರವೇ ರೋಪ್ ವೇ ಗೆ ಚಾಲನೆ ದೊರೆಯಲಿದೆ. ಹೌದು ಇನ್ನು ಮುಂದೆ ಶಿವನ ಸಮುದ್ರದ ಸೌಂದರ್ಯವನ್ನು ರೋಪ್ ವೇ ಮೂಲಕ ನೋಡಬಹುದು.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ಸಂಪರ್ಕಿಸುವ ರೋಪ್‌ವೇ ಗೆ ಚಾಲನೆ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಭರಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಭರಚುಕ್ಕಿಯಲ್ಲಿ ರೋಪ್‌ವೇ ಯೋಜನೆ ಕುರಿತು ಪ್ರಸ್ತಾಪಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಚಾಮರಾಜನಗರ ಸೂಕ್ತವಾಗಿದ್ದು, ರೋಪ್‌ವೇ ಯೋಜನೆಯಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು.

ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ಈ ಸುಂದರವಾದ ಜಲಪಾತಗಳು ಬೆಂಗಳೂರು ಜನರ ವಾರಾಂತ್ಯದ ಮೋಜು ಮಸ್ತಿ ತಾಣವಾಗಿದೆ. ಮಳೆಗಾಲದಲ್ಲಿ ಮೈದುಂಬಿ ಜಲಪಾತದ ನೀರು ಧುಮ್ಮಿಕ್ಕುತ್ತದೆ. ಆ ಸೊಬಗನ್ನು ಮತ್ತಷ್ಟು ಹತ್ತಿರದಿಂದ ಕಣ್ತುಂಬಿಕೊಳ್ಳಲು ರೋಪ್ ವೇ ಗಳು ಸಹಕಾರಿಯಾಗಲಿವೆ.ಈ ರೋಪ್‌ವೇ ಜನರು ಜಲಪಾತದ ವೈಮಾನಿಕ ನೋಟವನ್ನು ಪಡೆಯಲು ಸಹಾಯಕವಾಗುವುದು. ಇಷ್ಟೇ ಅಲ್ಲ, ಪ್ರವಾಸಿಗರು ಒಂದು ಜಲಪಾತದಿಂದ ಮತ್ತೊಂದು ಜಲಪಾತಕ್ಕೆ ತೆರಳಲು ಅನುಕೂಲವಾಗುತ್ತದೆ.

 

Advertisement
Next Article