ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಖ್ಯಾತ ಮಲಯಾಳಂ ನಟ, ಮಿಮಿಕ್ರಿ ಕಲಾವಿದ ಮುಹಮ್ಮದ್ ಹನೀಫ್ ನಿಧನ

02:05 PM Nov 10, 2023 IST | Bcsuddi
Advertisement

ತಿರುವನಂತಪುರಂ: ಖ್ಯಾತ ಮಲಯಾಳಂ ನಟ , ಮಿಮಿಕ್ರಿ ಕಲಾವಿದ ಕಲಾಭವನ್ ಮುಹಮ್ಮದ್ ಹನೀಫ್ ಅವರು ಗುರುವಾರ ಕೊಚ್ಚಿಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

Advertisement

ಎರ್ನಾಕುಲಂ ಜಿಲ್ಲೆಯ ಮತ್ತಂಚೇರಿಯ ಹಮ್ಜಾ ಹಾಗೂ ಜುಬೈದಾ ದಂಪತಿಯ ಪುತ್ರನಾಗಿದ್ದ ಹನೀಫ್ ಜನಿಸಿದರು. ಮೂಕಾಭಿನಯ ನಟರಾಗಿದ್ದ ಅವರು ನಾಟಕಗಳ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿ . ಬಳಿಕ ಮಲಯಾಳಂ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಲ್ಲದೇ ಹನೀಫ್ ಅವರು ಕೇರಳ ರಾಜ್ಯದಲ್ಲಿ ಮಿಮಿಕ್ರಿ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ ಪ್ರದರ್ಶನ ತಂಡದ ಕಲಾಭವನದ ಸದಸ್ಯರೂ ಆಗಿದ್ದರು.

ಕಲಾಭವನದ ಅವರ ಅನೇಕ ಸಹ ಕಲಾವಿದರಂತೆ ಹನೀಫ್ ಅವರು ಕೂಡ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಚೆಪ್ಪುಕಿಲುಕ್ಕನ ಚಂಗತಿ ಇವರ ಮೊದಲ ಸಿನಿಮಾವಾಗಿದ್ದು, ಬಳಿಕ 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಸಿನಿಮಾಗಳಲ್ಲಿ ಬಹುಪಾಲು ಹಾಸ್ಯ ಪಾತ್ರಗಳೇ ಹೆಚ್ಚಾಗಿತ್ತು.

Advertisement
Next Article