ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಖಾಸಗಿ ವಿಡಿಯೋ ಇಟ್ಟುಕೊಂಡು ದರ್ಶನ್‌ಗೆ ಪವಿತ್ರ ಬ್ಲಾಕ್‌ಮೇಲ್.! - ವಿಜಯಲಕ್ಷ್ಮಿ ಹೇಳಿಕೆಯಲ್ಲಿ ಸ್ಫೋಟಕ ಸತ್ಯ ಬಯಲು

11:46 AM Sep 10, 2024 IST | BC Suddi
Advertisement

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿರುವ ಸಾಕ್ಷಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಾರ್ಜ್​ಶೀಟ್​ನಲ್ಲಿ ವಿಜಯಲಕ್ಷ್ಮಿ ನೀಡಿರುವ ಹೇಳಿಕೆಗಳನ್ನೂ ಪೊಲೀಸರು ಸಾಕ್ಷಿಯಾಗಿ ದಾಖಲಿಸಿದ್ದಾರೆ.

Advertisement

ಈ ಹೇಳಿಕೆಯನ್ನು ಸ್ಫೋಟಕ ಸತ್ಯವೊಂದು ಬಯಲಾಗಿದೆ. ಹೌದು. ನನ್ನ ಆಪ್ತ ವಲಯದಿಂದ ದರ್ಶನ್ ಮತ್ತು ಪವಿತ್ರಾ ಬಗ್ಗೆ ಮತ್ತೆ ಮಾಹಿತಿ ಸಿಕ್ಕಿತ್ತು. ಖಾಸಗಿ ಫೋಟೋ ಮತ್ತು ವಿಡಿಯೋಗಳಿರುವ ಹಾರ್ಡ್​ ಡಿಸ್ಕ್ ಸಿಕ್ಕಿತ್ತು. ಅದನ್ನ ಪವಿತ್ರಾ ಗೌಡ ತನ್ನ ತಾಯಿಯ ಮನೆಯಲ್ಲಿ ಇಟ್ಟುಕೊಂಡಿದ್ದಳು. ಮಾಧ್ಯಮಗಳಿಗೆ ನೀಡೋದಾಗಿ ದರ್ಶನ್​ಗೆ ಬ್ಲ್ಯಾಕ್​ಮೇಲ್ ಮಾಡ್ತಿದ್ಳು. ಈ ವಿಚಾರ ನನಗೆ ನನ್ನ ಆಪ್ತವಲಯದಿಂದ ತಿಳಿದು ಬಂದಿರುತ್ತದೆ ಎಂದು ವಿಜಯಲಕ್ಷ್ಮಿ ದರ್ಶನ್ ಹೇಳಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಹೇಳಿಕೆಯಲ್ಲಿ ಏನಿದೆ?: 2015ನೇ ಇಸವಿಯ ಮಧ್ಯಂತರದಲ್ಲಿ ಯಾವುದೋ ಒಬ್ಬ ಅಪರಿಚಿತ ಮಹಿಳೆಯೊಬ್ಬರು ತನ್ನ ಮೊಬೈಲ್‌ ನಿಂದ ಕರೆ ಮಾಡಿ ನಿಮ್ಮ ಗಂಡ ದರ್ಶನ್ ಅವರು ನನ್ನೊಂದಿಗೆ ಲೀವಿಂಗ್ ರಿಲೇಷನ್ಸಿಪ್‌ನಲ್ಲಿದ್ದು, ಪದೇ, ಪದೇ ನಮ್ಮ ಮನೆಗೆ ಬರುತ್ತಿರುತ್ತಾರೆ. ಅವರಿಗೆ ನಮ್ಮ ಮನೆಗೆ ಬರಬಾರದಂತೆ ಬುದ್ಧಿ ಹೇಳಿ ಎಂದು ಹೇಳಿದ್ದು. ಆಗ ನನಗೆ ಆಶ್ಚರ್ಯವಾಗಿ ನಾನು ಅವರಿಗೆ ಬೈಯ್ದು ಕರೆ ಕಟ್ ಮಾಡಿರುತ್ತೇನೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆಗಾಗ ನನಗೂ ದರ್ಶನ್ ಅವರಿಗೂ ಸಣ್ಣ ಪುಟ್ಟ ಜಗಳ ಏರ್ಪಡುತ್ತಿರುತ್ತದೆ. ಇದಾದ ಬಳಿಕ 2018ನೇ ಇಸವಿಯಲ್ಲಿ ನನ್ನ ಪತಿ ದರ್ಶನ್ ಅವರು ಸದರಿ ಪವಿತ್ರಾ ಗೌಡ ಅವರಿಗೆ ರಾಜರಾಜೇಶ್ವರಿನಗರದ ಕೇಂಚೆನಹಳ್ಳಿಯ ಬಳಿ ಮನೆಯೊಂದನ್ನು ಖರೀದಿಸಿ ನೀಡಿರುವ ಬಗ್ಗೆ ಹಾಗೂ ಇದೇ ವರ್ಷದಲ್ಲಿ ರೇಂಜ್ ರೋವರ್ ಕಾರನ್ನು ಖರೀದಿಸಿ ನೀಡಿರುವುದಾಗಿ ನಮ್ಮ ಆಪ್ತರಿಂದ ತಿಳಿದು ಬಂದಿರುತ್ತದೆ.

ಈ ವಿಚಾರವಾಗಿ ನಾನು ದರ್ಶನ್ ಅವರ ಬಳಿ ಕೇಳಲಾಗಿ, ಅವರು ನನ್ನ ದುಡ್ಡು, ನನ್ನಿಷ್ಟ ನಿನ್ಯಾರು ಕೇಳೊದಿಕ್ಕೆ ಎಂದು ನನಗೆ ಬೈದಿದ್ದು, ನನಗೂ ಹಾಗೂ ದರ್ಶನ್ ಅವರಿಗೂ ವೈ ಮನಸ್ಸು ಏರ್ಪಟ್ಟಿರುತ್ತದೆ. ಆದಾಗ್ಯೂ ಸಹ ಸುಮಾರು 1ರಿಂದ 2 ತಿಂಗಳ ಬಳಿಕ ನಾನು ಹಾಗೂ ನನ್ನ ಪತಿ ದರ್ಶನ್ ಅವರು ಅನ್ನೋನ್ಯವಾಗಿರುತ್ತಿದ್ದೆವು. ನನ್ನ ಪತಿ ಆನಂತರ ನನ್ನೊಂದಿಗೆ ಎಂದಿಗೂ ಪವಿತ್ರಾ ಗೌಡ ಎಂಬ ಮಹಿಳೆಯ ವಿಚಾರವಾಗಿ ಏನನ್ನು ಹಂಚಿ ಕೊಳ್ಳುತ್ತಿರಲಿಲ್ಲ.

ಬಳಿಕ ನನಗೆ ನನ್ನ ಆಪ್ತ ವಲಯದಿಂದ ದರ್ಶನ್ ಹಾಗೂ ಪವಿತ್ರಾ ಗೌಡ @ ಸ್ಮಿತಾ ಗೌಡ ಇಬ್ಬರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳು ಇರುವಂತಹ ಒಂದು ಹಾರ್ಡ್ ಡಿಸ್ಕ್ ಅನ್ನು ಸದರಿ ಪವಿತ್ರಾ ಗೌಡ ತನ್ನ ತಾಯಿಯ ಮನೆಯಲ್ಲಿ ಇಟ್ಟುಕೊಂಡು, ಸದರಿ ಹಾರ್ಡ್‌ಡಿಸ್ಕ್ ಅನ್ನು ಮಾಧ್ಯಮಗಳಿಗೆ ನೀಡುವುದಾಗಿ ದರ್ಶನ್‌ರವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು ತಿಳಿದು ಬಂದಿರುತ್ತದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article