ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಖಾಸಗಿ ಕಂಪನಿಯ ರಿಚಾರ್ಜ್‌ಗಿಂತ BSNL ಅಗ್ಗ

11:02 AM Jul 25, 2024 IST | Bcsuddi
Advertisement

ಬೆಂಗಳೂರು : ಜುಲೈನಲ್ಲಿ ಎಲ್ಲ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಶೇಕಡಾ 25 ರಷ್ಟು ಹೆಚ್ಚಳವನ್ನು ಮಾಡಿದವು. ಆದರೆ ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್‌ ಕಂಪನಿ ಹೊಸ ಹೊಸ ರಿಚಾರ್ಜ್‌ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿ, ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದೆ. ಬಿಎಸ್‌ಎನ್‌ಎಲ್‌ ಇನ್ನೇನು ಕ್ಲೋಸ್‌ ಆಗಿ ಬಿಡುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಈಗ ಮತ್ತೆ ಪುಟಿದೇಳುವ ಸೂಚನೆ ನೀಡಿದೆ.

Advertisement

ಖಾಸಗಿ ಟೆಲಿಕಾಂ ಕಂಪನಿಗಳ ರಿಚಾರ್ಜ್‌ ದರಗಳು ಹೆಚ್ಚಾಗುತ್ತಿದ್ದಂತೆ, ಬಳಕೆದಾರ ಬಿಎಸ್ಎನ್‌ಎಲ್‌ಗೆ ಪೋರ್ಟ್‌ ಆಗಲು ಆರಂಭಿಸಿದರು. ದೇಶ 5ಜಿಯಲ್ಲಿರುವಾಗಲೂ, ಬಿಎಸ್‌ಎನ್‌ಎಲ್‌ 3ಜಿ ಸೇವೆಗಳನ್ನು ನೀಡುತ್ತಿದೆ. ಆದರೆ ನೀಡುವ ಸೌಲಭ್ಯವನ್ನು ಅಚ್ಚುಕಟ್ಟಾಗಿ ನೀಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಎಸ್‌ಎನ್‌ಎಲ್‌ 4ಜಿ ಸೇವೆಗಳನ್ನು ಬಳಕೆದಾರ ಆನಂದಿಸಬಹುದು. ಸದ್ಯಕ್ಕೆ ಈ ಸೇವೆಗಳು ತಮಿಳುನಾಡಿನಲ್ಲಿವೆ.

Advertisement
Next Article