ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು :ರಾಜ್ಯದಲ್ಲಿ ಜ.2 ರಿಂದ ಲಸಿಕಾ ಅಭಿಯಾನ

03:19 PM Dec 30, 2023 IST | Bcsuddi
Advertisement

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಗುತ್ತಿದ್ದು, ಈ ನಿಟ್ಟಿನಲ್ಲಿ ಜ. ೨ರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ವ್ಯಾಕ್ಸಿನ್ ನೀಡಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ರಾಜ್ಯದಲ್ಲಿನ ಕೋವಿಡ್ ಸೋಂಕಿನಿಂದ ಸಾವು ಸಂಭವಿಸುತ್ತಿದ್ದು, ಇದರಿಂದ ಆರೋಗ್ಯ ಇಲಾಖೆ ವ್ಯಾಕ್ಸಿನ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತೆ ವ್ಯಾಕ್ಸಿನ್ ಡ್ರೈವ್ ಆರಂಭವಾಗಲಿದೆ.

ಈಗಾಗಲೇ ರಾಜ್ಯದ ಜನರು ಮೊದಲನೇ ಹಾಗೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಮುನ್ನೆಚ್ಚರಿಕಾ ಲಸಿಕೆಯನ್ನು ಶೇ. 27% ಜನರು ಮಾತ್ರ ಪಡೆದಿದ್ದು, ಇನ್ನೂ 1.5 ಕೋಟಿಗೂ ಹೆಚ್ಚು ಜನ ಮೂರನೇ ಡೋಸ್ ವ್ಯಾಕ್ಸಿನ್ ಪಡೆದಿಲ್ಲ. ಈ ಕಾರಣದಿಂದ ಪ್ರಾಥಮಿಕ ಹಂತದಲ್ಲಿ 30 ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ಮುಂದಾಗಿದ್ದು, ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆ ಹಾಗೂ ಗಂಭೀರ ಆರೋಗ್ಯ ಸಮಸ್ಯಯಿಂದ ಬಳಲುತ್ತಿರುವವರು ಮೂರನೇ ಡೋಸ್ ಪಡೆಯವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

Advertisement
Next Article