For the best experience, open
https://m.bcsuddi.com
on your mobile browser.
Advertisement

ಕೊನೆಗೂ ಮೌನ ಮುರಿದು ಎಸ್‌ಐಟಿ ಮುಂದೆ ಹಾಜರಾದ್ರ ಸರ್ಕಾರಿ ಮಹಿಳಾ ಅಧಿಕಾರಿಗಳು

09:35 AM May 10, 2024 IST | Bcsuddi
ಕೊನೆಗೂ ಮೌನ ಮುರಿದು ಎಸ್‌ಐಟಿ ಮುಂದೆ ಹಾಜರಾದ್ರ ಸರ್ಕಾರಿ ಮಹಿಳಾ ಅಧಿಕಾರಿಗಳು
Advertisement

ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಇಬ್ಬರು ಮಹಿಳಾ ಸರ್ಕಾರಿ ಅಧಿಕಾರಿಗಳು ಕೊನೆಗೂ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಮಹಿಳೆಯರು ನೀಡಿರೋ ಹೇಳಿಕೆಯಲ್ಲಿ ಟ್ರಾನ್ಸ್ಫರ್ ಲೆಟರ್ ಕೊಡೋದಾಗಿ ಮಹಿಳಾ ಅಧಿಕಾರಿಗಳನ್ನ ಕರೆಸಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಾಗ್ತಿದೆ. ಈ ವೇಳೆ ವಿಡಿಯೋ ಮಾಡಿಕೊಂಡು ಪದೆ ಪದೇ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚುವಂತೆ ಒತ್ತಾಯ ಮಾಡ್ತಿದ್ರಂತೆ.

ಸದ್ಯ ಈ ಹೇಳಿಕೆಯ ಮೇಲೆ ಎಸ್‌ಐಟಿ ಕಾನೂನು ತಜ್ಞರ ಮೊರೆಹೊಗಿದ್ದಾರೆ. ಸರ್ಕಾರಿ ಅಧಿಕಾರಿಗಳು ನೀಡಿರೋ ಹೇಳಿಯನ್ನ ಪ್ರತ್ಯೇಕವಾಗಿ ಎಫ್‌ಐಆರ್ ಮಾಡಬೇಕಾ? ಇಲ್ಲ ಇಗಾಗ್ಲೆ ದಾಖಲಾಗಿರೋ ಪ್ರಕರಣದಲ್ಲಿ ಸೇರಿಸಿ ತನಿಖೆ ಮಾಡಬೇಕ ಎಂದು ಕಾನೂನು ತಜ್ಞರ ಸಲಹೆ ಕೇಳಿದ್ದಾರಂತೆ. ಇನ್ನು, ಮೊದಮೊದಲಿಗೆ ನಮ್ಮನ್ನ ಈ ವಿಚಾರದಲ್ಲಿ ಎಳಿಬೇಡಿ ಅಂತ ತನಿಖೆಯಿಂದ ಹಲವು ಮಹಿಳೆಯರು ದೂರು ಉಳಿದಿದ್ರು.

Advertisement

ಅದ್ರಲ್ಲೂ ಕೆಲ ಸರ್ಕಾರಿ ಅಧಿಕಾರಿಗಳು ರಜೆ ಪಡೆದು ಹೋಗಿದ್ರು. ಆದ್ರೆ ಆ ಮಹಿಳೆಯರು ಒತ್ತಡಕ್ಕೆ ಬಿದ್ದು ಸದ್ಯ ಎಸ್‌ಐಟಿ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಹೇಳಲಾಗ್ತಿದೆ.

Author Image

Advertisement