For the best experience, open
https://m.bcsuddi.com
on your mobile browser.
Advertisement

ಕೇಸ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿ ಇನ್ಮುಂದೆ ವಾಟ್ಸ್‌ಆ್ಯಪ್‌ ಮೂಲಕ ಸಿಗಲಿದೆ : ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

02:18 PM Apr 28, 2024 IST | Bcsuddi
ಕೇಸ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿ ಇನ್ಮುಂದೆ ವಾಟ್ಸ್‌ಆ್ಯಪ್‌ ಮೂಲಕ ಸಿಗಲಿದೆ   ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ
Advertisement

ನವದೆಹಲಿ : ವಿಚಾರಣೆಗೆ ಬಾಕಿ ಇರುವ ಮೊಕದ್ದಮೆಗಳ ಪಟ್ಟಿ, ಪ್ರಕರಣಗಳ ದಾಖಲಾತಿ ಮತ್ತು ಅರ್ಜಿಗಳ ವಿಚಾರಣೆಗೆ ಪಟ್ಟಿ ಮಾಡುವುದಕ್ಕೆ ಸಂಬಂಧಿಸಿದಂತಹ ಮಾಹಿತಿಗಳನ್ನು ಇನ್ಮುಂದೆ ವಕೀಲರಿಗೆ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ರವಾನಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಗುರುವಾರ ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಆಧರಿತ ಸೇವೆಗಳಲ್ಲಿ ವಾಟ್ಸ್‌ಆ್ಯಪ್‌ ಆಧರಿತ ಸೇವೆಯನ್ನೂ ಸೇರಿಸುವ ಕುರಿತು ತಮ್ಮ ನೇತೃತ್ವದ ಒಂಬತ್ತು ಸದಸ್ಯರ ನ್ಯಾಯಪೀಠಕ್ಕೆ ಸಲ್ಲಿಕೆಯಾದ ಅರ್ಜಿಯೊಂದರ ವಿಚಾರಣೆ ವೇಳೆ ಅವರು ಮಾಹಿತಿ ನೀಡಿದರು. ಡಿಜಿಟಲೀಕರಣದ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಭವಿಷ್ಯದಲ್ಲಿ ಗುರುತರ ಪರಿಣಾಮ ಬೀರಲಿದೆ. ಕಾಗದ ಮತ್ತು ಮರ ರಕ್ಷಿಸುವ ನಿಟ್ಟಿನಲ್ಲಿ ಅನುಕೂಲಕರವಾಗಲಿದೆ ಎಂದು ಸಿಜೆಐ ತಿಳಿಸಿದರು. ಸುಪ್ರೀಂ ಕೋರ್ಟ್‌ನ ಅಧಿಕೃತ ವಾಟ್ಸ್‌ಆ್ಯಪ್‌ ಸಂಖ್ಯೆಯಾದ 8767687676 ಅನ್ನು ಕೋರ್ಟ್‌ ಅಧಿಕಾರಿಗಳ ಜೊತೆ ಹಂಚಿಕೊಂಡರು.

ಇದು ಯಾವುದೇ ಕರೆ–ಸಂದೇಶಗಳನ್ನು ಸ್ವೀಕರಿಸುವುದಿಲ್ಲ ಎಂದೂ ಹೇಳಿದರು. ‘ತನ್ನ 75 ವರ್ಷಗಳ ಅನುಭವದಲ್ಲಿ ಸುಪ್ರೀಂ ಕೋರ್ಟ್‌ ಚಿಕ್ಕದೊಂದು ಉಪಕ್ರಮಕ್ಕೆ ಮುಂದಾಗಿದೆ. ಈ ಚಿಕ್ಕ ಉಪಕ್ರಮವು ಭವಿಷ್ಯದಲ್ಲಿ ಗುರುತರ ಪರಿಣಾಮವನ್ನು ಬೀರಲಿದೆ. ವಾಟ್ಸ್‌ಆ್ಯಪ್ ಸಂದೇಶ ಸೇವೆಯು ನಮ್ಮ ದೈನಂದಿನ ಜೀವನದಲ್ಲಿ ಸರ್ವವ್ಯಾಪಿಯಾಗಿದೆ. ನ್ಯಾಯ ಪಡೆಯುವ ಹಕ್ಕನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ತನ್ನ ಐಟಿ ಸೇವೆಗಳಲ್ಲಿ ವಾಟ್ಸ್ಆ್ಯಪ್‌ ಸೇವೆಯನ್ನೂ ಕೋರ್ಟ್‌ ಮಿಳಿತಗೊಳಿಸಿದೆ’ ಎಂದು ಚಂದ್ರಚೂಡ್‌ ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ವಕೀಲರು, ಕಕ್ಷಿದಾರರಿಗೆ ಪ್ರಕರಣಗಳ ದಾಖಲಾತಿ, ವಿಚಾರಣೆಗೆ ಬಾಕಿ ಇರುವ, ಆದೇಶ ಮತ್ತು ತೀರ್ಪಿನ ಕುರಿತು ಸಂದೇಶ ರವಾನೆಯಾಗುತ್ತದೆ ಎಂದರು.

Advertisement

Author Image

Advertisement