ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೇರಳ ಬಾಂಬ್ ಸ್ಫೋಟ ಪ್ರಕರಣ: ನ.29ರ ವರೆಗೆ ಆರೋಪಿ ನ್ಯಾಯಾಂಗ ಬಂಧನ

09:09 AM Nov 01, 2023 IST | Bcsuddi
Advertisement

ಕೊಚ್ಚಿ: ಕೇರಳದ ಕಳಮಶೇರಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಘಟನೆಯಲ್ಲಿ 12 ವರ್ಷದ ಬಾಲಕಿ ಸೇರಿ ಮೂವರು ಮೃತಪಟ್ಟಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

ಘಟನೆ ಬೆನ್ನಲ್ಲೇ ಶಂಕಿತ ಆರೋಪಿ ಡೊಮ್ನಿಕ್ ಮಾರ್ಟಿನ್ ಪೊಲೀಸರಿಗೆ ಶರಣಾಗಿದ್ದಾರೆ. ಸತತ ವಿಚಾರಣೆ ಬಳಿಕ ಆರೋಪಿಯನ್ನು ಬಂಧಿಸಿದ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಆರೋಪಿ ಡೊಮ್ನಿಕ್ ಮಾರ್ಟಿನನ್ನು ನ. 29ರ ವರೆಗೆ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಇದೀಗ ಆರೋಪಿಯನ್ನು ಎರ್ನಾಕುಳಂ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.ಡೊಮ್ನಿಕ್ ದಾಳಿ ಹಿಂದಿನ ರೂವಾರಿ ಅನ್ನೋದು ಪತ್ತೆಯಾಗಿದ್ದು ಕೇಂದ್ರ ತನಿಖಾ ತಂಡಗಳು ಪ್ರಕರಣದ ತನಿಖೆ ನಡೆಸುತ್ತಿದೆ.

ಝಮ್ರಾ ಇಂಟರ್‌ ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ 2500ಕ್ಕೂ ಹೆಚ್ಚು ಜನರು ಸಾಮೂಹಿಕ ಪ್ರಾರ್ಥನೆ ಮಾಡುವ ವೇಳೆ ಬಾಂಬ್ ಸ್ಫೋಟಗೊಂಡಿತ್ತು. ಘಟನೆ ಬೆನ್ನಲ್ಲೇ ಡೊಮಿನಿಕ್‌ ಮಾರ್ಟಿನ್‌ ಎಂಬ ವ್ಯಕ್ತಿ ತ್ರಿಶ್ಶೂರು ಜಿಲ್ಲೆಯ ಕೊಡಕ್ಕರ ಪೊಲೀಸ್‌ ಠಾಣೆಗೆ ಶರಣಾಗಿದ್ದು, ದಾಳಿಯನ್ನು ಮಾಡಿದ್ದು ನಾನೇ ಎಂದು ಹೇಳಿಕೊಂಡಿದ್ದಾನೆ.

Advertisement
Next Article