For the best experience, open
https://m.bcsuddi.com
on your mobile browser.
Advertisement

ಕೇಂದ್ರ ಬಜೆಟ್‌ 2024 : ಗರೀಬ್ ಕಲ್ಯಾಣ್ ಯೋಜನೆ ಮುಂದಿನ 5 ವರ್ಷಕ್ಕೆ ವಿಸ್ತರಿಸಿದ ವಿತ್ತ ಸಚಿವೆ

12:07 PM Jul 23, 2024 IST | Bcsuddi
ಕೇಂದ್ರ ಬಜೆಟ್‌ 2024   ಗರೀಬ್ ಕಲ್ಯಾಣ್ ಯೋಜನೆ ಮುಂದಿನ 5 ವರ್ಷಕ್ಕೆ ವಿಸ್ತರಿಸಿದ ವಿತ್ತ ಸಚಿವೆ
Advertisement

ನವದೆಹಲಿ : ಲೋಕಸಭೆಯಲ್ಲಿ 2024-2025ರ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರ್ವರಿಗೂ ಅನ್ವಯ ಆಗುವಂಥ ಬಜೆಟ್ ಮಂಡಿಸಲಾಗುತ್ತಿದೆ. ಮಧ್ಯಂತರ ಬಜೆಟ್​ನಲ್ಲಿ ಗರೀಬ್, ಮಹಿಳಾ, ಯುವ, ಅನ್ನದಾತರಿಗೆ ಒತ್ತು ನೀಡಲಾಗಿತ್ತು. ಈಗಲೂ ಬಡವರಿಗೆ ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನ ವಿಸ್ತರಣೆ ಮಾಡಲಾಗಿದೆ. ಭಾರತದ ಆರ್ಥಿಕತೆ ಚೆನ್ನಾಗಿದ್ದು ಹಣದುಬ್ಬರ ನಿಯಂತ್ರಣದಲ್ಲಿದೆ. ಇದರಿಂದಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನ ಮುಂದಿನ 5 ವರ್ಷದವರೆಗೆ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Author Image

Advertisement