ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೆ.ಎನ್.ಶಶಿರಾಜ್‍ಗೆ ಪಿಹೆಚ್‍ಡಿ ಪದವಿ

07:37 AM Feb 13, 2024 IST | Bcsuddi
Advertisement

 

Advertisement

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಬೋಧಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎನ್.ಶಶಿರಾಜ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ (ಪಿಎಚ್‍ಡಿ) ಪದವಿ ನೀಡಿದೆ.

ಧಾರವಾಡ ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮಾರ್ಗದರ್ಶಕ ಡಾ.ಶ್ರೀನಿವಾಸ ನಾಯಕ ಅವರ ಮಾರ್ಗದರ್ಶನದಲ್ಲಿ ``ಬಯೋಫ್ಯಾಬ್ರಿಕೇಶನ್ ಆಫ್ ಸಿಲ್ವರ್ ನಾನೋಪಾರ್ಟಿಕಲ್ಸ್ ಯುಸಿಂಗ್ ಫ್ಲವರ್ ಬಡ್ಸ್ ಎಕ್ಸ್ಟ್ರಾಕ್ಟ್ ಆಫ್ ಸೆಲೆಕ್ಟೆಡ್ ಮೆಂಬರ್ಸ್ ಆಫ್ ಲ್ಯಾವಿಯೆಸಿ ಆ್ಯಂಡ್ ಇವ್ಯಾಲ್ಯುಯೇಶನ್ ಆಫ್ ದೇರ್ ಮೈಕೊಟಾಕ್ಸಿಕ್ ಪೆÇಟೆನ್ಸಿ ಆನ್ ಡಿಸೀಸಸ್ ಆಫ್ ಸೊರ್ಘಮ್’’ ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು.

ಕೆ.ಎನ್.ಶಶಿರಾಜ್ ಇವರ ಸಂಶೋಧನ ಲೇಖನಗಳು ಅನೇಕ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ ಹಾಗೂ ಸಂಶೋಧನ ಪೂರಕವಾಗಿ ಹಲವಾರು ವಿಶ್ವವಿದ್ಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಸಂಶೋಧನ ವಿಷಯಗಳನ್ನು ಮಂಡಿಸಿರುತ್ತಾರೆ. ಕೆ.ಎನ್.ಶಶಿರಾಜ್ ಅವರು ಚಿತ್ರದುರ್ಗ ನಗರದ ಜೆ.ಸಿ.ಆರ್ ಬಡಾವಣೆಯ ನಿವಾಸಿ,  ಕೆ.ನಾಗರಾಜ ಹಾಗೂ ದಿ.ಬಿ.ಕಾಂತಮ್ಮ ಅವರ ಹಿರಿಯ ಪುತ್ರರಾಗಿದ್ದಾರೆ.

 

Tags :
ಕೆ.ಎನ್.ಶಶಿರಾಜ್‍ಗೆ ಪಿಹೆಚ್‍ಡಿ ಪದವಿ
Advertisement
Next Article