ಕೆಲವೇ ಇಂಚುಗಳ ಅಂತರದಲ್ಲಿ ರೈಲು ಅಪಘಾತದಿಂದ ಪಾರಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ತಂಡವು ರೈಲ್ವೇ ಹಳಿಯೊಂದರ ಕೆಳಗೆ ಜಲಾವೃತಗೊಂಡಿರುವ ಹೊಳೆಯನ್ನು ವೀಕ್ಷಿಸಲು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ರೈಲ್ವೆ ಹಳಿಯ ಮೇಲೆ ರೈಲು ಬಂದಿದೆ.
ಆ ವೇಳೆ ಈ ಘಟನೆ ಸಂಭವಿಸಿದೆ. ಕೂದಲೆಳೆ ಅಂತರದಿಂದ ಸಿಎಂ ಚಂದ್ರಬಾಬು ನಾಯ್ಡು ಅಪಘಾತದಿಂದ ಪಾರಾಗಿದ್ದಾರೆ. ಈ ಪ್ರವಾಹವು 2005ರ ವಿಜಯವಾಡ ಪ್ರವಾಹಕ್ಕಿಂತ ಭೀಕರವಾಗಿದೆ ಎಂದು ವಿವರಿಸಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆಯ ಅಬ್ಬರ ಕೊಂಚ ಮಟ್ಟಿಗೆ ತಗ್ಗಿದೆಯಾದರೂ ಪ್ರವಾಹದ ಪರಿಸ್ಥಿತಿ ಮಾತ್ರ ಮುಂದುವರಿದಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ನೀರು ಭೂಮಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡಂತೆ ಕಾಣುತ್ತಿದೆ.
ಜನರು ಮಂಡಿಯವರೆಗಿನ ನೀರಿನಲ್ಲೇ ಓಡಾಡ ಬೇಕಾದ ಪರಿಸ್ಥಿತಿ ಇದೆ. ರೈಲ್ವೆ ಹಳಿಗಳ ಮೇಲೂ ನೀರು ನಿಂತು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ. ಆ ಎಲ್ಲದರ ಪರಿಶೀಲನೆಗೆ ವಿಜಯವಾಡಾದ ಮಧುರಾ ನಗರಕ್ಕೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ ಕೊಟ್ಟಿದ್ದರು. ಅಲ್ಲಿಗೆ ಸಮೀಪದ ರೈಲ್ವೆ ಬ್ರಿಡ್ಜ್ ಮೇಲೆ ಓಡಾಡುತ್ತಾ ಕೆಳಗೆ ಉಕ್ಕಿ ಹರಿಯುತ್ತಿದ್ದ ಪ್ರವಾಹದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅದೇ ಸಮಯಕ್ಕೆ ವೇಗವಾಗಿ ಬಂದ ರೈಲು ಅದೇ ಮಾರ್ಗದಲ್ಲಿ ಹಾದು ಹೋಗಿದೆ. ಚಂದ್ರಬಾಬು ನಾಯ್ಡು ಸಹ ಅದೇ ರೈಲ್ವೆ ಹಳಿಯ ಪಕ್ಕದಲ್ಲೇ ಇದ್ದರು. ಅವರ ಭದ್ರತಾ ಪಡೆಯ ಸಿಬ್ಬಂದಿ, ಅಧಿಕಾರಿಗಳು, ಸಾರ್ವಜನಿಕರು ಎಲ್ಲರೂ ಒಂದು ಕ್ಷಣ ಅವಾಕ್ಕಾಗಿ ನಿಂತರು. ಅವರ ಪಕ್ಕದಲ್ಲೇ ರೈಲು ವೇಗವಾಗಿ ಹಾದು ಹೋಗಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.