For the best experience, open
https://m.bcsuddi.com
on your mobile browser.
Advertisement

ಕೆಮಿಕಲ್ ಹಾಕಿ ಹಣ್ಣು ಮಾಡಿದ ಮಾವು ಆರೋಗ್ಯಕ್ಕೆ ತುಂಬಾ ಡೇಂಜರ್..!

09:03 AM Jul 04, 2024 IST | Bcsuddi
ಕೆಮಿಕಲ್ ಹಾಕಿ ಹಣ್ಣು ಮಾಡಿದ ಮಾವು ಆರೋಗ್ಯಕ್ಕೆ ತುಂಬಾ ಡೇಂಜರ್
Advertisement

ರಾಸಾಯನಿಕದಿಂದ ತುಂಬಿದ ಮಾವಿನ ಹಣ್ಣುಗಳು ಎಲ್ಲಾ ಕಡೆ ಸಿಗುತ್ತಿವೆ. ಇಂತಹ ಹಣ್ಣುಗಳಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ಲೆಕ್ಕ ಹಾಕಲು ಕೂಡ ಸಾಧ್ಯವಿಲ್ಲ.

ಈಗ ಮ್ಯಾಂಗೋ ಸೀಸನ್. ಎಲ್ಲಾ ಕಡೆ ಮಾವು ಸುವಾಸನೆ. ಈ ಬಾರಿ ಬೆಲೆ ಕೂಡ ಅಷ್ಟೇನೂ ದುಬಾರಿ ಅನಿಸುತ್ತಿಲ್ಲ. ಹಾಗೆಂದು ಸಿಕ್ಕಸಿಕ್ಕ ಕಡೆ ಮಾವಿನ ಹಣ್ಣನ್ನು ತೆಗೆದುಕೊಂಡು ತಿನ್ನಲು ಹೋದರೆ ನಿಮ್ಮ ಆರೋಗ್ಯಕ್ಕೆ ಕಂಟಕ! ಮಾವಿನ ಹಣ್ಣಿನ ವಿಚಾರದಲ್ಲಿ ಹೀಗೇಕೆ ಎಂದು ನೀವು ಹುಬ್ಬೇರಿಸಬಹುದು. ಆದರೆ ಅದಕ್ಕೆ ಕಾರಣವಿದೆ.

ದುಡ್ಡಿನ ಆಸೆಗೆ ಮಾವಿನ ಹಣ್ಣನ್ನು ವ್ಯಾಪಾರ ಮಾಡುವ ಜನರು ಅವುಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಿ ಬಲವಂತವಾಗಿ ಹಣ್ಣು ಮಾಡಿರು ತ್ತಾರೆ. ಇಂತಹ ಮಾವಿನ ಹಣ್ಣುಗಳು ರಾಸಾಯನಿಕದ ಮುಸುಕು ಹಾಕಿಕೊಂಡು ಮಾರುಕಟ್ಟೆಯಲ್ಲಿ ಕಣ್ಣಿಗೆ ರಾಚುವಂತೆ ಮಿಂಚುತ್ತವೆ. ನಿಮಗೂ ಕೂಡ ಇಂತಹ ಮಾವಿನ ಹಣ್ಣುಗಳನ್ನೇ ತಿನ್ನಬೇಕು ಎನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವುಗಳು ಆರೋಗ್ಯಕ್ಕೆ ಬಹಳ ಡೇಂಜರ್!

Advertisement

ಕೆಮಿಕಲ್ ಮ್ಯಾಂಗೋ ಎಫೆಕ್ಟ್!

ಯಾರು ರಾಸಾಯನಿಕದಿಂದ ಹಣ್ಣಾದ ಮಾವಿನ ಹಣ್ಣುಗಳನ್ನು ತಿನ್ನುತ್ತಾರೆ ಅಂತಹವರಿಗೆ ಸಾಕಷ್ಟು ಬಗೆಯ ಆರೋಗ್ಯದ ಅಡ್ಡ ಪರಿಣಾಮಗಳು ಕಂಡು ಬರುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಾಕರಿಕೆ, ವಾಂತಿ, ಭೇದಿ, ರಕ್ತದಿಂದ ಕೂಡಿದ ಭೇದಿ, ಅತಿಯಾದ ಆಯಾಸ, ಎದೆಯಲ್ಲಿ ಗ್ಯಾಸ್ಟ್ರಿಕ್ ತರಹದ ಅನುಭವ, ತಲೆನೋವು ಇತ್ಯಾದಿ ಸಮಸ್ಯೆಗಳನ್ನು ಕಾಣುತ್ತಾರೆ.

ಇನ್ನು ಕೆಲವು ಪ್ರಕರಣಗಳಲ್ಲಿ ಮಾವಿನ ಹಣ್ಣಿನಲ್ಲಿ ತುಂಬಿರುವ ರಾಸಾಯನಿಕ ಅಂಶಗಳು ಮನುಷ್ಯನ ದೇಹದ ಮೇಲೆ ವ್ಯತಿ ರಿಕ್ತವಾಗಿ ಪರಿಣಾಮ ಬೀರುತ್ತವೆ.

ಚರ್ಮದ ಮೇಲೆ ಅಲ್ಸರ್ ಕಾಣಿಸುವುದು, ಕಣ್ಣುಗಳಿಗೆ ಹಾನಿ, ಗಂಟಲಿನ ಸಮಸ್ಯೆ, ಆಹಾರ ವನ್ನು ತಿನ್ನಲು ಕಷ್ಟವಾಗುವುದು, ಕಣ್ಣುಗಳಲ್ಲಿ ಉರಿ ಈ ತೊಂದರೆ ಗಳನ್ನು ಸಹ ಅನುಭವಿಸಬಹುದು.​

ಇನ್ನು ಕೆಲವು ಅಡ್ಡ ಪರಿಣಾಮಗಳು

ಮೇಲೆ ಹೇಳಿದ ಪರಿಣಾಮಗಳು ಮಾವಿನ ಹಣ್ಣಿನ ರಾಸಾಯನಿಕ ದಿಂದ ನೇರವಾಗಿ ಉಂಟಾದರೆ ಕೆಮ್ಮು, ದಮ್ಮು, ಚರ್ಮದ ಮೇಲೆ ಗುಳ್ಳೆಗಳು ಪರೋಕ್ಷವಾಗಿ ಕಾಣಿಸಿಕೊಳ್ಳುತ್ತವೆ.

ಕೆಲವರಿಗೆ ಇಂತಹ ಮಾವಿನ ಹಣ್ಣುಗಳನ್ನು ತಿಂದ ನಂತರ ಉಸಿರಾಟದ ತೊಂದರೆ ಕೂಡ ಎದುರಾಗ ಬಹುದು. ಈ ಸಂದರ್ಭದಲ್ಲಿ ತಡಮಾಡದೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ.

ನರಮಂಡಲ ಸಮಸ್ಯೆಗಳು

ರಾಸಾಯನಿಕ ತುಂಬಿದ ಮಾವಿನ ಹಣ್ಣುಗಳನ್ನು ತಿನ್ನು ವುದರಿಂದ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾ ಗುತ್ತದೆ ಎಂದು ಹೇಳುತ್ತಾರೆ. ಸಾಕಷ್ಟು ಜನರಿಗೆ ಇದ್ದಕ್ಕಿ ದ್ದಂತೆ ರಕ್ತದಲ್ಲಿ ಆಮ್ಲಜನಕದ ಕುಸಿತ ಕಾಣುತ್ತದೆ.

ಕೆಲವರಿಗೆ ತಲೆ ಸುತ್ತು ಬರುವುದು, ನಿದ್ರೆ ಮಂಪರು ಬಂದಂತೆ ಆಗುವುದು, ಕಾಲುಗಳಲ್ಲಿ ಜೋಮು, ಪಾರ್ಶ್ವ ವಾಯು, ರಕ್ತದ ಒತ್ತಡದಲ್ಲಿ ಕುಸಿತ ಇತ್ಯಾದಿ ಸಮಸ್ಯೆಗಳು ಎದುರಾಗಬಹುದು.

ಮಾವಿನ ಕಾಯಿಯನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕಗಳು

ಕ್ಯಾಲ್ಸಿಯಂ ಕಾರ್ಬೈಡ್ ಸಾಮಾನ್ಯವಾಗಿ ಮಾವಿನ ಕಾಯಿ ಯನ್ನು ಹಣ್ಣಿನ ರೂಪಕ್ಕೆ ತಿರುಗಿಸಲು ಬಳಸ ಲಾಗುವ ರಾಸಾಯನಿಕ ಅಂಶ. ಇದರ ಜೊತೆಗೆ ಇನ್ನು ಕೆಲವು ರಾಸಾ ಯನಿಕ ಅಂಶಗಳನ್ನು ಬಳಸಲಾಗುತ್ತದೆ. ಅಂದರೆ ಉದಾಹ ರಣೆಗೆ ethephon.

ಈ ರಾಸಾಯನಿಕ ಅಂಶಗಳು ಅಸಿಟೈಲಿನ್ ಅಂಶಗಳನ್ನು ಉತ್ಪತ್ತಿ ಮಾಡುತ್ತವೆ. ಮಾವಿನಕಾಯಿ ಬಹಳ ಬೇಗನೆ ಹಣ್ಣಾಗಲು ಸಹಾಯ ಮಾಡುವ ರಾಸಾಯನಿಕ ಅಂಶ ಇದಾಗಿದೆ.

ಆದರೆ ಇದರಿಂದ ಮಾವಿನಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡು ಬರುವ ಖನಿಜಾಂಶಗಳು ಮತ್ತು ಪೌಷ್ಟಿಕ ಸತ್ವ ಗಳು ನಾಶವಾಗು ತ್ತವೆ. ಬದಲಿಗೆ ಆರ್ಸಿನಿಕ್ ಮತ್ತು ಫಾಸ್ಫರಸ್ ಎಂಬ ವಿಷಕಾರಿ ಅಂಶಗಳು ಮಾವಿನ ಹಣ್ಣಿನಲ್ಲಿ ತುಂಬಿಕೊಳ್ಳುತ್ತವೆ.​

ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳು

ಇವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇವು ಮರದಲ್ಲಿ ಹಣ್ಣಾಗುತ್ತವೆ. ಆನಂತರದಲ್ಲಿ ಅವು ಗಳನ್ನು ಕಿತ್ತು ಮಾರಲಾಗುತ್ತದೆ.

ಇಂತಹ ಹಣ್ಣುಗಳನ್ನು ತಿನ್ನುವುದರಿಂದ ಮಾವಿನ ಹಣ್ಣಿನಿಂದ ಸಿಗಬೇಕಾದ ನಿಜವಾದ ಪೌಷ್ಟಿಕ ಸತ್ವಗಳು ದೇಹಕ್ಕೆ ಸಿಗುತ್ತವೆ.

ನೈಸರ್ಗಿಕವಾಗಿ ತಾವಾಗಿಯೇ ಹಣ್ಣಾದ ಮಾವಿನ ಹಣ್ಣು ಗಳು ನೋಡಲು ಕೆಮಿಕಲ್ ಹಾಕಿ ಹಣ್ಣು ಮಾಡಿದ ಮಾವಿನ ಹಣ್ಣುಗಳಷ್ಟು ಚೆನ್ನಾಗಿ ಕಾಣುವುದಿಲ್ಲ.

ಆದರೆ ಇವುಗಳು ತುಂಬಾ ಆರೋಗ್ಯಕರ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ನಿಸರ್ಗದ ಮಡಿಲಲ್ಲಿ ಹಣ್ಣಾದ ಮಾವಿನ ಹಣ್ಣುಗಳು ನಿಜವಾದ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತವೆ.

ಆದರೆ ಕೆಮಿಕಲ್ ಹಾಕಿ ಹಣ್ಣು ಮಾಡಿದ ಮಾವಿನ ಹಣ್ಣುಗಳು ರಾಸಾಯನಿಕಯುಕ್ತ ವಾಸನೆಯನ್ನು ಬೀರುತ್ತವೆ.

ಸೀಸನ್ ಅಲ್ಲದ ಸಮಯದಲ್ಲಿ ಬರುವ ಹಣ್ಣುಗಳನ್ನು ಎಂದಿಗೂ ಖರೀದಿಸಬೇಡಿ. ಏಕೆಂದರೆ ಅವುಗಳನ್ನು ರಾಸಾಯನಿಕದಿಂದಲೇ ಹಣ್ಣು ಮಾಡಲಾಗಿರುತ್ತದೆ. ಹಾಗಾಗಿ ಮಾವಿನ ಹಣ್ಣನ್ನು ಕೂಡ ಸೀಸನ್ ಇರುವಾಗ ಖರೀದಿಸಿದರೆ ಒಳ್ಳೆಯದು.​

Author Image

Advertisement