For the best experience, open
https://m.bcsuddi.com
on your mobile browser.
Advertisement

ಕೆಫೆ ಸ್ಪೋಟ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ- ಶಂಕಿತ ಆರೋಪಿ 'ಬಳ್ಳಾರಿಯ ಶಬ್ಬೀರ್' ವಶಕ್ಕೆ

02:12 PM Mar 13, 2024 IST | Bcsuddi
ಕೆಫೆ ಸ್ಪೋಟ  ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ  ಶಂಕಿತ ಆರೋಪಿ  ಬಳ್ಳಾರಿಯ ಶಬ್ಬೀರ್  ವಶಕ್ಕೆ
Advertisement

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್‌ ಸ್ಪೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್‌ಐಎ ) ಬುಧವಾರ ಮಹತ್ವರ ಪ್ರಗತಿ ಸಾಧಿಸಿದೆ. ರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ ಶಂಕಿತ ಆರೋಪಿಯನ್ನು ಬಳ್ಳಾರಿ ಮೂಲದ ಶಬ್ಬೀರ್ ಎಂದು ಗುರುತಿಸಲಾಗಿದ್ದು, ಈತನನ್ನು ಎನ್‌ಐಎ ವಶಕ್ಕೆ ಪಡೆದಿದೆ.

ಬಳ್ಳಾರಿಯ ಕೌಲ್‌ ಬಜಾರ್‌ ನಿವಾಸಿ ಶಬ್ಬೀರ್‌ನನ್ನು ಇಂದು ಮುಂಜಾನೆ 4 ಗಂಟೆಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ್ ಎನ್ನಲಾಗಿದೆ.

ಮಾರ್ಚ್ 1 ರಂದು ಪ್ರಸಿದ್ಧ ವೈಟ್‌ಫೀಲ್ಡ್ ಉಪಾಹಾರ ಗೃಹ ರಾಮೇಶ್ವರಂ ಕೆಫೆಯಲ್ಲಿ IED ಸ್ಫೋಟದ ನಂತರ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದರು. ಕೇಂದ್ರ ಗೃಹಸಚಿವಾಲಯದ ಆದೇಶದ ನಂತರ NIA ಕಳೆದ ವಾರ ಪ್ರಕರಣವನ್ನು ವಹಿಸಿಕೊಂಡಿದೆ.

Advertisement

ಪ್ರಕರಣದಲ್ಲಿ ಆತನನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿಯಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿಯೇ ಈತನೇ ಎಂಬುದು ಇನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆ ಖಚಿತಪಡಿಸಿಲ್ಲ

Author Image

Advertisement