ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೃಷ್ಣ ಜನ್ಮಾಷ್ಟಮಿ ವಿಶೇಷ: ಅವಲಕ್ಕಿ ಪಾಯಸ ಮಾಡುವ ವಿಧಾನ

09:02 AM Aug 26, 2024 IST | BC Suddi
Advertisement

ಕೃಷ್ಣಜನ್ಮಾಷ್ಟಮಿಗೆ ವಿಧವಿಧವಾದ ತಿಂಡಿಗಳನ್ನ ಮಾಡೇ ಮಾಡ್ತಾರೆ. ಹಾಗೇ ಕೃಷ್ಣನಿಗೆ ತುಂಬಾ ಇಷ್ಟ ಎಂದೇ ಹೇಳಲಾಗುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ..?

Advertisement

ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು:ಅವಲಕ್ಕಿ- 1/2 ಕಪ್ಸಬ್ಬಕ್ಕಿ- 1/4 ಕಪ್ಬೆಲ್ಲ- 1/2 ಕಪ್ಹಾಲು- 1/2 ಕಪ್ನೀರು- 1 ಅಥವಾ 1/2 ಕಪ್ತುಪ್ಪ- 1 ಚಮಚಏಲಕ್ಕಿ ಪುಡಿ- ಸ್ವಲ್ಪಒಣದ್ರಾಕ್ಷಿ- 2 ಟೀಸ್ಪೂನ್ಗೋಡಂಬಿ- 5

ಮಾಡುವ ವಿಧಾನ: ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ತುಪ್ಪದಲ್ಲಿ 5 ಗೋಡಂಬಿ, 2 ಟೀಸ್ಪೂನ್ ಒಣದ್ರಾಕ್ಷಿ ಹುರಿಯಿರಿ.ಅವು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿದು ಪಕ್ಕಕ್ಕೆ ಇರಿಸಿಒಂದು ಪಾತ್ರೆಯಲ್ಲಿ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. ಬಳಿಕ ಅದಕ್ಕೆ ನೀರು ಬೆರೆಸಿ ಸ್ಟೌವ್ ಮೇಲಿಟ್ಟು ಮೃದು ಹಾಗೂ ಪಾರದರ್ಶಕವಾಗುವವರೆಗೆ ಬೇಯಲು ಬಿಡಿ.ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿ ಹಾಕಿ 10 ನಿಮಿಷ ನೆನೆಯಲು ಬಿಡಿ.

ಅವಲಕ್ಕಿ ಮೃದುವಾದ ಬಳಿಕ ತೊಳೆದಿಡಿ.ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿಳಿಯಾಗುವವರೆಗೆ ಬಿಡಿ. ನಂತ್ರ ಬೆಲ್ಲದ ನೀರನ್ನು ಇನ್ನೊಂದು ಪಾತ್ರೆಗೆ ಸೋಸಿಕೊಳ್ಳಿಸ್ಟವ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ನೆನೆದ ಅವಲಕ್ಕಿ ಹಾಕಿ, 1/2 ಚಮಚ ತುಪ್ಪ ಹಾಕಿ 2 ನಿಮಿಷ ಹುರಿಯಿರಿ. ನಂತ್ರ ಬೆಲ್ಲದ ಪಾಕವನ್ನ ಬೆರೆಸಿ. (ಒಂದು ವೇಳೆ ನೀವು ಬಳಸುವ ಬೆಲ್ಲದ ಪಾಕ ನೀರಿನಷ್ಟು ತೆಳುವಾಗಿದ್ದರೆ ಅದನ್ನು ಇನ್ನೊಂದು ಪ್ಯಾನ್ ಗೆ ಹಾಕಿ ಸ್ವಲ್ಪ ಕುದಿಸಿ ಬಳಿಕ ಬೆರೆಸಿ).

ಪಾಕ ದಪ್ಪವಾಗಿದ್ದರೆ ನೇರವಾಗಿ ಬಳಸಿ.ಬೆಲ್ಲವನ್ನು ಸೇರಿಸಿದ ನಂತರ ಹಾಲು ಒಡೆಯುವ ಸಾಧ್ಯತೆ ಇರುವುದರಿಂದ ಹೆಚ್ಚು ಕುದಿಸಬೇಡಿ.ನಂತರ ಬೆಂದ ಸಬ್ಬಕ್ಕಿಯನ್ನು ಬೆಲ್ಲದ ಪಾಕ ಮತ್ತು ಅವಲಕ್ಕಿ ಜೊತೆ ಬೆರೆಸಿ ಕೆಲ ನಿಮಿಷ ಬೇಯಿಸಿ. ಸಬ್ಬಕ್ಕಿ, ಬೆಲ್ಲದ ಪಾಕ ಹಾಗೂ ಅವಲಕ್ಕಿ ಚೆನ್ನಾಗಿ ಬೆಂದು ಗಟ್ಟಿಯಾದ ಬಳಿಕ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ.ಇನ್ನೊಂದು ಪಾತ್ರೆಯಲ್ಲಿ ಹಾಲು ಹಾಕಿ ಅದನ್ನು 10 ನಿಮಿಷ ಕುದಿಸಿ ನಂತರ ತಣ್ಣಗಾಗಲು ಬಿಡಿ.ಅವಲಕ್ಕಿ ಹಾಗೂ ಸಬ್ಬಕ್ಕಿಯನ್ನು ಬೇಯಿಸಿದ ಪಾತ್ರೆಗೆ ಹಾಲು, ಗೋಡಂಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಅವಲಕ್ಕಿ ಪಾಯಸ ಸವಿಯಲು ಸಿದ್ಧ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article