ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೃಷಿ RTC ಅಲ್ಲಿ ಹೆಸರು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ ಮತ್ತು ಲಿಂಕ್

11:02 AM Aug 08, 2024 IST | BC Suddi
Advertisement

ರೈತರು ತಮ್ಮ ಜಮೀನಿನ RTC ಅಲ್ಲಿ ಹೆಸರು ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ? ಮತ್ತು ಅನ್ಲೈನ್ ನಲ್ಲಿ RTC ವಿವರ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Advertisement

ಪಹಣಿಯಲ್ಲಿ ಹೆಸರು ತಪ್ಪಾಗಿ ನಮೂದಿಸಿದಲ್ಲಿ ಅದನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಪಹಣಿಯಲ್ಲಿ ಹೆಸರು  ತಿದ್ದುಪಡೆ ಪ್ರಕ್ರಿಯ ಹೇಗಿರುತ್ತದೆ? ಈ ಕುರಿತು ಹಲವು ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ ಇಂದು ನಾವು ಸಂಕ್ಷೀಪ್ತವಾಗಿ ಈ ಅಂಕಣದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇವೆ. ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ,

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಬೇಕಾದರೆ ಬೇಕಾಗುವ ದಾಖಲೆಗಳು:

1) ಆಧಾರ ಕಾರ್ಡ ಪ್ರತಿ.

2) ಪ್ರಸ್ತುತ ಲಭ್ಯವಿರುವ ಪಹಣಿಯನ್ನು ತೆಗೆದುಕೊಳ್ಳಬೇಕು. ನೆಮ್ಮದಿ ಕೇಂದ್ರ/ತಹಶೀಲ್ದಾರ ಕಚೇರಿಯಲ್ಲಿ ಸಿಗುತ್ತದೆ.

3) 20 ರೂಪಾಯಿ ಬೆಲೆಯ ಇ-ಸ್ಟಾಂಪ್ ಪೇಪರ್ (ಬಾಂಡ್ ಪೇಪರ್): ಇ-ಸ್ಟಾಂಪ್ ಪೇಪರ್ ನಲ್ಲಿ ಹೆಸರು ತಿದ್ದುಪಡಿ ಮಾಡುತ್ತಿರುವ ಕುರಿತು ವಿವರವನ್ನು ಟೈಪಿಂಗ್ ಮಾಡಿಸಬೇಕು. ನಂತರ ಅದರ ಮೇಲೆ ವಕೀಲರಿಂದ ತಪ್ಪದೇ ನೋಟರಿ ಮಾಡಿಸಬೇಕಾಗುತ್ತದೆ.

4) ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಕುರಿತು ಮಾದರಿ ಅರ್ಜಿ ಸಿದ್ದಪಡಿಸಬೇಕು.

ಪಹಣಿ ತಿದ್ದುಪಡಿ ಪ್ರಕ್ರಿಯೆ ಹೇಗಿರುತ್ತದೆ?

ಈ ಮೇಲಿನ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ತಾಲೂಕಿನಲ್ಲಿರುವ ಭೂಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಭೂಮಿ ಕೇಂದ್ರದವರು ನಿಮ್ಮ ಗ್ರಾಮಕ್ಕೆ ಸಂಬಂಧಪಡುವ ಗ್ರಾಮಲೆಕ್ಕಿಗರ ಬಳಿ ನೀವು ಸಲ್ಲಿಸಿದ ಅರ್ಜಿ ಕಳಿಸುತ್ತಾರೆ. ತದನಂತರ ಗ್ರಾಮ ಲೆಕ್ಕಿಗರು ತಮಗೆ ಬಂದಿರುವ ದಾಖಲೆಗಳನ್ನು ಪರಿಶೀಲಿಸಿ.

ದಾಖಲೆಗಳು ತಪ್ಪಾಗಿದ್ದಲ್ಲಿ ತಿರಸ್ಕರಿಸುವ ಹಕ್ಕನ್ನು ಸಹ ಅವರು ಹೊಂದಿರುತ್ತಾರೆ. ಒಂದು ವೇಳೆ ದಾಖಲೆಗಳು ಸರಿಯಾಗಿದ ಪಕ್ಷದಲ್ಲಿ ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ. ಅವರ ಆದೇಶಕ್ಕೆ ಅನುಗುಣವಾಗಿ ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಮಾಡುಲಾಗುತ್ತದೆ. ಕೆಲವು ದಿನಗಳ ನಂತರ ತಿದ್ದುಪಡಿಯಾದ ಪಹಣಿ ನಿಮ್ಮ ಕೈ ಸೇರುತ್ತದೆ. ಈ ರೀತಿಯಾಗಿ ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಮಾಡಬಹುದು.

ಪಹಣಿ ತಿದ್ದುಪಡಿಯ ಪ್ರಯೋಜನಗಳೇನು?

ಜಮೀನು ಮಾರುವಾಗ/ಕೊಂಡುಕೊಳ್ಳುವಾಗ/ವಿಭಾಗ/ದಾನ ಮಾಡುವಾಗ್ ಹೆಸರು ಸರಿಯಾಗಿರುವುದು ಕಡ್ಡಾಯವಾಗಿದೆ.

ಬ್ಯಾಂಕಿನಿಂದ ಬೆಳೆ ಸಾಲ ಪಡೆದುಕೊಳ್ಳಲು ಆಧಾರ ಪ್ರತಿಯಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿ ಇರುವ ಹೆಸರು ಒಂದೇ ಆಗಿದ್ದಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.

ಸರ್ಕಾರದಿಂದ ಸಿಗುವ ಸವಲತ್ತು ಅಥವಾ ಸಹಾಯಧನ ಪಡೆಯುವುದಕ್ಕೆ ಪಹಣಿಯಲ್ಲಿ ಹೆಸರು ಸರಿಯಾಗಿ ಇರುವುದು ಕಡ್ಡಾಯವಾಗಿದೆ.

ಸರ್ಕಾರದಿಂದ ಯಾವುದೇ ಯೋಜನೆಯಿಂದ ಹಣ ನೇರವಾಗಿ ಅಥವಾ ಡಿಬಿಟಿ ಮುಖಾಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು ಸಹಕಾರಿಯಾಗುತ್ತದೆ.

Online RTC-ಜಮೀನಿನ ಪಹಣಿಯ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ನೋಡುವುದು ಹೇಗೆ:

ನಿಮ್ಮ ಜಮೀನಿನ ಪಹಣಿ ಮಾಹಿತಿಯನ್ನು ನೀವು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ನಲ್ಲಿ ಕಂದಾಯ ಇಲಾಖೆಯ ಈ ವೆಬ್ಸೈಟ್ ಭೇಟಿ ಮಾಡಿ https://landrecords.karnataka.gov.in/service2/ ಇಲ್ಲಿ ನಿಮ್ಮ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ, ಸರ್ವೆನಂಬರ್, ಹಿಸ್ಸಾ ನಂಬರ್, ಯಾವ ವರ್ಷದ ಪಹಣಿ ನೋಡಬೇಕಾಗಿದೆ ಅದನ್ನು ಆಯ್ಕೆ ಮಾಡಿಕೊಂದು ಪಹಣಿಯ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಇಲ್ಲಿ ನೀವು ಜಮೀನಿನ ಖಾತೆ ಬದಲಾವಣೆ, ಹಕ್ಕು ಬದಲಾವಣೆಗೆ, ಬಾಕಿ ಇರುವ ವಹಿವಾಟಿನ ವಿವರಗಳು, ವಹಿವಾಟು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಸಹ ಗಮನಿಸಬಹುದು. ಪಹಣಿ ಗಣಕೀಕೃತಗೊಂಡ ನಂತರದಿಂದ ಜಮೀನಿನ ಮೇಲೆ ಯಾವುದಾದರೂ ವಹಿವಾಟು ನಡೆದಿದ್ದರೆ ಅಂತಹ ವಹಿವಾಟುಗಳ ಸಂಪೂರ್ಣ ಮಾಹಿತಿಯನ್ನು ಸಹ ಇಲ್ಲಿ ನೋಡಬಹುದು.

ಜಮೀನು ಕೃಷಿಯೇತರ ಬಳಕೆಗಾಗಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದಲ್ಲಿ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಬಹುದು ಹಾಗೂ ತಂತ್ರಾಂಶ ಮೂಲಕ ಭೂ ಪರಿವರ್ತನೆಯಾಗಿರುವ ಆದೇಶಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಮೇಲೆ ನೀಡಿರುವ ವೆಬ್ಸೈಟ್ ಭೇಟಿ ಮಾಡಿ ರೈತರು ಮನೆಯಲ್ಲಿಯೇ ಕುಳಿತು ಪಹಣಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬವುದಾಗಿದೆ.

step-1: ಮೊದಲಿಗೆ ಈ online rtc ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ bhoomi website ಅನ್ನು ಪ್ರವೇಶ ಮಾಡಬೇಕು.

step-2: ಇದಾದ ನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ/ಹಳ್ಳಿ, ಸರ್ವೆ ನಂಬರ್, ಹಾಕಿ "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

step-3: "Go" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಹಿಸ್ಸಾ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು "Fetch Details" ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಜಮೀನಿನ ಮಾಲೀಕರ ವಿವರ ತೋರಿಸುತ್ತದೆ ಅಲ್ಲೇ ಕೆಳಗೆ ಕಾಣುವ view" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಪಹಣಿ/RTC ತೆರೆದುಕೊಳ್ಳುತ್ತದೆ.

Advertisement
Next Article