For the best experience, open
https://m.bcsuddi.com
on your mobile browser.
Advertisement

ಕೃಷಿ ಪಂಪ್ ಸೆಟ್ ಹೊಂದಿರುವವರು ತಪ್ಪದೇ ಈ ಕೆಲಸವನ್ನು ಮಾಡುವುದು ಕಡ್ಡಾಯ

04:14 PM Aug 22, 2024 IST | BC Suddi
ಕೃಷಿ ಪಂಪ್ ಸೆಟ್ ಹೊಂದಿರುವವರು ತಪ್ಪದೇ ಈ ಕೆಲಸವನ್ನು ಮಾಡುವುದು ಕಡ್ಡಾಯ
Advertisement

ರಾಜ್ಯ ವಿದ್ಯುತ್ ಸರಬರಾಜು ಕಂಪನಿಯಿಂದ ಕೃಷಿ ಪಂಪ್ ಸೆಟ್  ಹೊಂದಿರುವ  ರೈತರಿಗೆ ನೂತನ ಆದೇಶವನ್ನು ಹೊರಡಿಸಲಾಗಿದೆ.

ಈ ಕ್ರಮದಿಂದ ರೈತರಿಗೆ ಕೃಷಿ ಪಂಪ್ ಸೆಟ್ ವಿದ್ಯುತ್ ಬಿಲ್ ಪಾವತಿಯ ಅರ್ಥಿಕವಾಗಿ ಹೊರೆ ತಪ್ಪುವುದರಿಂದ ಬೆಳೆಗಳನ್ನು ಬೆಳೆಯ ತಗಲುವ ವೆಚ್ಚ ಕಡಿಮೆ ಮಾಡಿದಂತಾಗುತ್ತದೆ. ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಪ್ರಕಟಣೆಯನ್ವಯ ಹೊಸದಾಗಿ ಕೃಷಿ ಜಮೀನನ್ನು ಖರೀದಿ ಮಾಡಿದವರು ಮತ್ತು ಮರಣ ಹೊಂದಿದವರ ಹೆಸರಿನಲ್ಲಿ RR ಸಂಖ್ಯೆಯನ್ನು ಹೊಂದಿರುವವರು ತಮ್ಮ ಹೆಸರಿಗೆ RR ಸಂಖ್ಯೆಯನ್ನು ಕಡ್ಡಾಯವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

 ಸಂಖ್ಯೆಯ ಹೆಸರು ಬದಲಾವಣೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

Advertisement

ಗ್ರಾಹಕರು/ರೈತರು RR ಸಂಖ್ಯೆಯ ಹೆಸರು ಬದಲಾವಣೆಗೆ ನಿಮ್ಮ ಹಳ್ಳಿಯ ಲೈನ್ ಮ್ಯಾನ್ ಅವರವನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹೋಬಳಿ/ಹತ್ತಿರ ವಿದ್ಯುತ್ ಸರಬರಾಜು ಕಂಪನಿ(KEB) ಕಚೇರಿಯನ್ನು ಭೇಟಿ ಮಾಡಿ ಕೃಷಿ ಪಂಪ್ ಸೆಟ್ ನ RR ಸಂಖ್ಯೆ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.

 ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು?

1) ಅರ್ಜಿದಾರರ ಆಧಾರ್ ಕಾರ್ಡ.

2) ಅರ್ಜಿದಾರರ ಪೋಟೋ.

3) RR ಸಂಖ್ಯೆ ವಿವರ.

4) ಮೊಬೈಲ್ ಸಂಖ್ಯೆ.

5) ಅರ್ಜಿ ನಮೂನೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Author Image

Advertisement