ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೃಷಿ ಇಲಾಖೆಯಲ್ಲಿ 672 ಹುದ್ದೆಗಳು: ಕೃಷಿ ಅಧಿಕಾರಿಗಳ ನೇಮಕಾತಿಗೆ ಅವಕಾಶ

03:15 PM Oct 25, 2024 IST | BC Suddi
Advertisement

ಕೃಷಿ ಇಲಾಖೆಯಲ್ಲಿ ಗ್ರೂಪ್‌ ಬಿ ವೃಂದದಲ್ಲಿ ಖಾಲಿ ಇರುವ 672 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕ ಸೇವಾ ಆಯೋಗ - ಕೆಪಿಎಸ್‌ಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Advertisement

ಈ ಪೈಕಿ ಕೃಷಿ ಅಧಿಕಾರಿ 86 ಹುದ್ದೆಗಳು

ಸಹಾಯಕ ಕೃಷಿ ಅಧಿಕಾರಿ 586 ಹುದ್ದೆಗಳು

ಅರ್ಜಿ ಸಲ್ಲಿಸಲು ಆರಂಭದ ದಿನ ಅಕ್ಟೋಬರ್ 7, 2024 ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 7, 2024

ಶೈಕ್ಷಣಿಕ ಅರ್ಹತೆ

ಕೃಷಿ ಅಧಿಕಾರಿಗೆ ಬಿ.ಎಸ್ಸಿ. ಕೃಷಿ ಅಥವಾ ಬಿಎಸ್‌ಸಿ ಆನರ್ಸ್‌ ಕೃಷಿ ಪದವಿ ಪಾಸಾಗಿರಬೇಕು ಸಹಾಯಕ ಕೃಷಿ ಅಧಿಕಾರಿಗೆ ಬಿ.ಎಸ್ಸಿ. ಕೃಷಿ ಸೇರಿದಂತೆ ಕೃಷಿಗೆ ಸಂಬಂಧಪಟ್ಟ 9 ಬಗೆಯ ವಿಷಯಗಳ ಪೈಕಿ ಯಾವುದಾದರೂ ಒಂದು ಪದವಿ ಪಾಸಾಗಿರಬೇಕು.

ವಯೋಮಿತಿ ಅಭ್ಯರ್ಥಿಗೆ ಗರಿಷ್ಟ 38 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.

ಕನ್ನಡ ಭಾಷೆ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಕರ್ನಾಟಕ ಲೋಕ ಸೇವಾ ಆಯೋಗ - ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

http://kpsc.kar.nic.in

Advertisement
Next Article