ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ ಗಾಂಧಿ

01:45 PM Dec 27, 2023 IST | Bcsuddi
Advertisement

ನವದೆಹಲಿ: ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಪ್ರಮುಖ ಕುಸ್ತಿ ಪಟುಗಳನ್ನು ಭೇಟಿ ಆಗಿದ್ದಾರೆ. ಒಲಿಂಪಿಕ್​ನಲ್ಲಿ ಕಂಚು ವಿಜೇತ ಬಜರಂಗ್ ಪುನಿಯಾ ಸೇರಿ ಹಲವರನ್ನು ಭೇಟಿಯಾಗಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.

Advertisement

ಕುಸ್ತಿ ಪಟುಗಳಾದ ದೀಪಕ್ ಪುನಿಯಾ, ಬಜರಂಗ್ ಪುನಿಯಾ ಸೇರಿ ಹಲವರನ್ನು ರಾಹುಲ್ ಗಾಂಧಿ ಭೇಟಿಯಾಗಿರುವ ಫೋಟೋ ವೈರಲ್ ಆಗಿದೆ. ಡಬ್ಲ್ಯೂಎಫ್​ಐನಲ್ಲಿ ಇತ್ತೀಚೆಗೆ ಚುನಾವಣೆ ನಡೆದಿತ್ತು. ಈ ಎಲೆಕ್ಷನ್​ನಲ್ಲಿ ಹಿಂದಿನ ಕಳಂಕಿತ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಕೆ ಆಗಿದ್ದಾರೆ. ಬ್ರಿಜ್ ಭೂಷಣ್​​ ವಿರುದ್ಧ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಇದೆ. ಅವರ ತಲೆದಂಡ ಬಳಿಕ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ ಆಗಿರೋದು, ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಭಾರತ ಸರ್ಕಾರ ಡಬ್ಲ್ಯೂಎಫ್​ಐಗೆ ಆಯ್ಕೆ ಆಗಿರುವ ನೂತನ ಸದಸ್ಯರನ್ನು ಅಮಾನತಿನಲ್ಲಿಟ್ಟಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ದೇಶದ ಕುಸ್ತಿಪುಟುಗಳು ಭಾರತ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ. ಭಜರಂಗ್ ಪುನಿಯಾ, ಕಾಮನ್​ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ವಿಜೇತ ವಿನೇಶ್ ಪೋಗಾಟ್, ಒಲಿಂಪಿಕ್​ನಲ್ಲಿ ಕಂಚು ಗೆದ್ದಿರುವ ಸಾಕ್ಷಿ ಮಲಿಕ್ ಸೇರಿ ಅನೇಕ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement
Next Article