ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕುಲದೇವತೆ ಎಂದು ಡೈನೋಸರ್ ಮೊಟ್ಟೆಗಳಿಗೆ ಪೂಜೆ ಸಲ್ಲಿಸುತ್ತಿದ್ದ ಗ್ರಾಮಸ್ಥರು

01:05 PM Dec 21, 2023 IST | Bcsuddi
Advertisement

ಭೋಪಾಲ್: ಡೈನೋಸರ್ ಮೊಟ್ಟೆಗಳ ಪಳೆಯುಳಿಕೆಯನ್ನು ಜನರು ಹಲವಾರು ವರ್ಷಗಳಿಂದ ಕುಲ ದೇವತೆ ಎಂದು ಪೂಜಿಸುತ್ತಾ ಬಂದಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪದಲ್ಯ ಎಂಬ ಗ್ರಾಮದಲ್ಲಿ ನಡೆದಿದೆ.

Advertisement

ಪದಲ್ಯ ಗ್ರಾಮದ ಜನರು ಗುಂಡಿನ ಆಕಾರದಲ್ಲಿದ್ದ ಶಿಲೆಗಳಂತಹ ಆಕೃತಿಗಳನ್ನು "ಕಾಕಾಡ್ ಭೈರವ್" ಎಂಬ ಹೆಸರಿಟ್ಟು ಪೂಜಿಸುತ್ತಿದ್ದರು. ಈ ದೇವರು ಕೃಷಿ ಭೂಮಿಯನ್ನು, ಜಾನುವಾರುಗಳನ್ನು ಕಾಯುತ್ತದೆ ಎಂಬ ನಂಬಿಕೆ ಈ ಜನರಲ್ಲಿದೆ. ಆದರೆ ಇದೀಗ ಅವರು ಪೂಜಿಸುತ್ತಿದ್ದ ಶಿಲೆಗಳು ವಾಸ್ತವದಲ್ಲಿ ಶಿಲೆಗಳೇ ಅಲ್ಲ, ಡೈನೋಸರ್ ಮೊಟ್ಟೆಗಳ ಪಳೆಯುಳಿಕೆ ಎಂಬ ವಿಚಾರ ಬಹಿರಂಗವಾಗಿದೆ.

ಇತ್ತೀಚಿನ ದಿನಗಳಲ್ಲಿ ಧಾರ್ ಜಿಲ್ಲೆಯ ಭಾಗ್ ಪ್ರದೇಶದಲ್ಲಿರುವ ಡೈನೋಸರ್ ಪಾರ್ಕ್ ನಲ್ಲಿಯೂ ಗುಂಡಿನ ಆಕಾರದಲ್ಲಿದ್ದ ಶಿಲೆಗಳಂತಹ ಆಕೃತಿಗಳನ್ನು ಕಂಡ ಜನರು ಪೂಜೆ ಮಾಡಲು ಮುಂದಾಗುತ್ತಿದ್ದರು. ಮಾಹಿತಿ ತಿಳಿದ ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಡೈನೋಸರ್ ಮೊಟ್ಟಗಳ ಪಳೆಯುಳಿಕೆಯನ್ನು ದೇವರೆಂದು ಪೂಜಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಬಳಿಕ ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ ತಜ್ಞರು ಇದುವರೆಗೆ ಜಿಲ್ಲೆಯಲ್ಲಿ 250 ಕ್ಕೂ ಅಧಿಕ ಮೊಟ್ಟೆಗಳ ಪಳೆಯುಳಿಕೆಯನ್ನು ಪತ್ತೆ ಮಾಡಿದ್ದಾರೆ.

Advertisement
Next Article