ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕುರಿ ಸಾಗಣಿಕೆಗೆ  ಅರ್ಜಿ ಆಹ್ವಾನ

07:58 AM Jul 17, 2024 IST | Bcsuddi
Advertisement

 

Advertisement

ಚಿತ್ರದುರ್ಗ : ಜುಲೈ.16: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಿಂದ   2024-25ನೇ ಸಾಲಿಗೆ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20 1 ಕುರಿ ಅಥವಾ ಮೇಕೆ ಸಾಗಣಿಕೆಗೆ ಅರ್ಜಿ ಆಹ್ವಾನಿಸಲಾಗಿದೆ.

ನಿಗಮದ  ಕೃಷಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ನೊಂದಾಯಿಸಿಕೊAಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು. ಚಿತ್ರದುರ್ಗ ಜಿಲ್ಲೆಗೆ ಒಟ್ಟು 706 ಘಟಕಗಳನ್ನು ನೀಡಲು ಗುರಿ ನಿಗಧಿ ಮಾಡಲಾಗಿದೆ. ಪ್ರತಿ ಘಟಕ್ಕೆ ರೂ.1,75,000/- ವೆಚ್ಚ ನಿರ್ಧರಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದಿಂದ ರೂ.43,750 ಸಹಾಯ ಧನ ನೀಡಲಾಗುವುದು. ಫಲಾನುಭವಿಗಳು ರೂ.43,750ಗಳ ವಂತಿಕೆ ನೀಡಬೇಕು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿAದ ರೂ.87,500ಕ್ಕೆ ಶೇ.9.26ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಫಲಾನುಭವಿಗಳು 20 1 ಕುರಿ ಅಥವಾ ಮೇಕೆಗಳನ್ನು ಖರೀದಿಸಿ ಸ್ವಂತವಾಗಿ ಸಾಗಾಣಿಕೆ ಮಾಡಬಹುದು.

ಕುರಿ ಮತ್ತು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅರ್ಜಿಗಳು ದೊರೆಯುತ್ತವೆ. ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಹಕಾರಿ ಸಂಘ ಅಥವಾ ಚಿತ್ರದುರ್ಗ ಪಶು ಆಸ್ಪತ್ರೆ ಆವರಣದಲ್ಲಿರುವ ನಿಗಮದ ಸಹಾಯಕ ನಿರ್ದೇಶಕ ಕಚೇರಿಗೆ ಜುಲೈ 31 ರ ಸಂಜೆ 5:30ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 08194-222718, ಮೊಬೈಲ್ ಸಂಖ್ಯೆ 9448656231ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Tags :
ಕುರಿ ಸಾಗಣಿಕೆಗೆ  ಅರ್ಜಿ ಆಹ್ವಾನ
Advertisement
Next Article