ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

"ಕೀರ್ತಿ ಚಕ್ರ" ಪ್ರಶಸ್ತಿ ಮತ್ತು ಹಣದೊಂದಿಗೆ ವಿದೇಶಕ್ಕೆ ತೆರಳಲು ಸೊಸೆಯ ಯತ್ನ - ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ತಂದೆಯ ಆರೋಪ

06:22 PM Jul 20, 2024 IST | Bcsuddi
Advertisement

ನವದೆಹಲಿ: ನನ್ನ ಮಗ ಹುತಾತ್ಮನಾದ ನಂತರ ಸೊಸೆ ಸ್ಮೃತಿ ಸಿಂಗ್ ಕೀರ್ತಿ ಚಕ್ರ ಪ್ರಶಸ್ತಿ ಹಾಗೂ ಹಣದೊಂದಿಗೆ ಆಸ್ಟ್ರೇಲಿಯಾಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ತಂದೆ ರವಿ ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಜುಲೈ 7 ರಂದು, ಸ್ಮೃತಿ ಮತ್ತು ಅವರ ಅತ್ತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.

Advertisement

ಆದರೆ ಈಗ ಎಲ್ಲ ಸೌಲಭ್ಯದೊಂದಿಗೆ ವಿದೇಶಕ್ಕೆ ಪಲಾಯನ ಮಾಡಲು ತಯಾರಿ ನಡೆಸಿದ್ದಾರೆ. ನಿಜವಾಗಿಯೂ ಆಕೆ ನನ್ನ ಮಗನನ್ನು ಪ್ರೀತಿ ಮಾಡಿಯೇ ಇರಲಿಲ್ಲ. ಬದಲಾಗಿ ಪ್ರೀತಿ ಹೆಸರಲ್ಲಿ ವಂಚನೆ ಮಾಡಿದ್ದಾರೆ. ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಓದುವಾ ಮೊದಲ ನೋಟದಲ್ಲೇ ಅಂಶುಮಾನ್ ಜೊತೆ ಪ್ರೀತಿ ಆಗಿದೆ ಎಂದು ಸ್ಮೃತಿ ಹೇಳಿದ್ದಾರೆ. ಪಂಜಾಬ್‌ನ ಗುರುದಾಸ್‌ಪುರದಲ್ಲಿರುವ ತನ್ನ ಮನೆಗೆ ಬಂದಿದ್ದ ಸೊಸೆ ಸ್ಮೃತಿ ಸಿಂಗ್, ಅಂಶುಮಾನ್ ಅವರ ಬಟ್ಟೆ ಮತ್ತು ಫೋಟೋ ಆಲ್ಬಮ್‌ನೊಂದಿಗೆ ಶೌರ್ಯ ಪ್ರಶಸ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಕೂಡ ರವಿ ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ. ಜೊತೆಗೆ ಯೋಧರು ಹುತಾತ್ಮರಾದ ನಂತರ ಸಲ್ಲುವ ಸಮ್ಮಾನ ಹಾಗೂ ಸೌಲಭ್ಯಗಳ ಬಗ್ಗೆ ಇರುವ 'ನೆಕ್ಸ್ಟ್ ಆಫ್ ಕಿನ್' ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಹುತಾತ್ಮ ಅಂಶುಮಾನ್ ತಂದೆ ಒತ್ತಾಯಿಸಿದ್ದಾರೆ.

Advertisement
Next Article