For the best experience, open
https://m.bcsuddi.com
on your mobile browser.
Advertisement

ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ವಿಶ್ವದಾಖಲೆ

05:30 PM Jan 27, 2024 IST | Bcsuddi
ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ವಿಶ್ವದಾಖಲೆ
Advertisement

ಮುಂಬೈ: ವಿರಾಟ್ ಕೊಹ್ಲಿ 2023ರ ಐಸಿಸಿ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದು, ಈ ಮೂಲಕ ಅತೀ ಹೆಚ್ಚು ಬಾರಿ ಏಕದಿನ ಆಟಗಾರನ ಪ್ರಶಸ್ತಿ ಪಡೆದ ದಾಖಲೆ ಕೊಹ್ಲಿ ಮುಡಿಗೇರಿದೆ. ಜೊತೆಗೆ ಅತ್ಯಧಿಕ ಬಾರಿ ಐಸಿಸಿ ಪ್ರಶಸ್ತಿ ಪಡೆದ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ ಅವರು ಇದುವರೆಗೆ ನಾಲ್ಕು ಬಾರಿ ಐಸಿಸಿ ಏಕದಿನ ಪ್ರಶಸ್ತಿ, ಒಟ್ಟು ಹತ್ತು ಬಾರಿ ಐಸಿಸಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇನ್ನು ಕಿಂಗ್ ಕೊಹ್ಲಿಯನ್ನು ಹೊರತುಪಡಿಸಿ ವಿಶ್ವದ ಯಾವುದೇ ಆಟಗಾರನೂ ಇಷ್ಟೊಂದು ಪ್ರಶಸ್ತಿಯನ್ನು ಗಳಿಸಿಲ್ಲ.

2012, 2017, 2018 ಮತ್ತು 2023 ರಲ್ಲಿ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಆಟಗಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಜೊತೆಗೆ 2018 ರಲ್ಲಿ ಐಸಿಸಿ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ.

Advertisement

ಇನ್ನು ವಿರಾಟ್ ಕೊಹ್ಲಿ ಅವರು 2017 ಮತ್ತು 2018 ರಲ್ಲಿ ಐಸಿಸಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು, 2010 ರಲ್ಲಿ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ, 2010 ರಲ್ಲಿ ದಶಕದ ಅತ್ಯುತ್ತಮ ಏಕದಿನ ಆಟಗಾರ ಪ್ರಶಸ್ತಿ, 2019 ರಲ್ಲಿ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಈ ಮೂಲಕ ಒಟ್ಟು 10 ಐಸಿಸಿ ಪ್ರಶಸ್ತಿಗಳನ್ನು ಪಡೆದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.

Author Image

Advertisement