ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಕಾಶ್ಮೀರ ಭಾರತದ ಭಾಗವಲ್ಲ, ಅದು ಈಗಾಗಲೇ ಪ್ರತ್ಯೇಕ ದೇಶವೇ?' - ರಾಹುಲ್ ಗಾಂಧಿಗೆ ನೆಟ್ಟಿಗರಿಂದ ಕ್ಲಾಸ್

04:35 PM Sep 24, 2024 IST | BC Suddi
Advertisement

ಕಾಶ್ಮೀರ: ಜಮ್ಮು & ಕಾಶ್ಮೀರ ಚುನಾವಣೆ ಭಾಗವಾಗಿ ಪೂಂಚ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಇಳಿಸಿರುವುದು ಇದೇ ಮೊದಲು ಎಂದು ಹೇಳಿಕೆ ನೀಡಿದ್ದಾರೆ. "ಕೇಂದ್ರಾಡಳಿತ ಪ್ರದೇಶಗಳನ್ನು ಹಲವು ಬಾರಿ ರಾಜ್ಯಗಳಾಗಿ ಪರಿವರ್ತಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳಾಗಿ ಮಾಡಲಾಗಿದೆ ಮತ್ತು ರಾಜ್ಯಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಆಂಧ್ರ ಪ್ರದೇಶವನ್ನು ಆಂಧ್ರ ಮತ್ತು ತೆಲಂಗಾಣವಾಗಿ ವಿಂಗಡಿಸಲಾಗಿದೆ. ಛತ್ತೀಸ್ಗಢವನ್ನು ಮಧ್ಯಪ್ರದೇಶದಿಂದ ಬೇರ್ಪಡಿಸಲಾಗಿದೆ. ಇನ್ನು ಜಾರ್ಖಂಡ್ ಅನ್ನು ಬಿಹಾರದಿಂದ ರಚಿಸಲಾಗಿದೆ. ಆದರೆ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ ಎಂದು ರಾಹು ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು. "ನಿಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿಮ್ಮಿಂದ ಕಸಿದುಕೊಳ್ಳಲಾಗಿದೆ ಮತ್ತು ಇದು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರ ರಾಜ್ಯವು ಇನ್ನು ಮುಂದೆ ರಾಜ್ಯವಾಗಿರದೆ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದು ಹೇಳಲಾಗಿದೆ. ಆದ್ದರಿಂದ, ನಾವು ಮೊದಲು ನಿಮ್ಮ ರಾಜ್ಯದ ಸ್ಥಾನಮಾನವನ್ನು ನೀಡಬೇಕೆಂದು ಮತ್ತು ನಿಮ್ಮ ರಾಜ್ಯವನ್ನು ನಿಮಗೆ ಹಿಂತಿರುಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಹೇಳಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, 'ನಿಮಗೆ (ಕಾಶ್ಮೀರಿಗಳಿಗೆ) ಸಂಬಂಧಿಸಿದ ನಿರ್ಧಾರಗಳನ್ನು ಹೊರಗಿನವರು (ಭಾರತ ಸರ್ಕಾರ) ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹಾಗಾದರೆ ಅವರ ಪ್ರಕಾರ, ಕಾಶ್ಮೀರ ಭಾರತದ ಭಾಗವಲ್ಲ, ಅದು ಈಗಾಗಲೇ ಪ್ರತ್ಯೇಕ ದೇಶವೇ? ಜಮ್ಮು & ಕಾಶ್ಮೀರದಲ್ಲಿ ಭಾರತೀಯರು ಹೊರಗಿನವರೇ? ರಾಹುಲ್ ಗಾಂಧಿ ಎಂತಹ ಅಪಾಯಕಾರಿ ಮನುಷ್ಯ. ತುಕ್ಡೆ ತುಕ್ಡೆ ಗ್ಯಾಂಗ್ ಮುಖ್ಯಸ್ಥ' ಎಂದು ಕಮೆಂಟ್ ಮಾಡಿದ್ದಾರೆ.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article