ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕಾಲಿನ ಸಹಾಯದಿಂದ ಕಾರು ಚಲಾಯಿಸಿ ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ!

01:22 PM Apr 25, 2024 IST | Bcsuddi
Advertisement

ಕೇರಳ: ಎರಡು ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸಿ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಪಡೆದ ಕೇರಳದ ಜಿಲುಮೋಲ್​​ ಮರಿಯೆಟ್ ಥಾಮಸ್.

Advertisement

ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿದ್ದ ಮರಿಯೆಟ್ ಥಾಮಸ್ ಚಿಕ್ಕ ವಯಸ್ಸಿನಲ್ಲೇ ಕಾಲಿನ ಮೂಲಕವೇ ದೈನಂದಿನ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಂಡಿದ್ದರು. ಇದೀಗ ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ದೇಶದ ಗಮನ ಸೆಳೆದಿದ್ದಾಳೆ. ಇದಲ್ಲದೇ ಎರಡು ಕೈಗಳಿಲ್ಲದೇ ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತ್ತೀಚೆಗಷ್ಟೇ ತಾನು ಕಾರು ಚಲಾಯಿಸುತ್ತಿರುವ ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಇದೀಗಾಗಲೇ 60ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೆ, 2.5 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.

ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸುವುದರ ಜೊತೆಗೆ ಚಿತ್ರಕಲೆಯಲ್ಲೂ ಸೈ ಎನಿಸಿಕೊಂಡಿರುವ ಈಕೆ ಸಾಕಷ್ಟು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಇದೀಗ ದೇಶದಾದ್ಯಂತ ಖ್ಯಾತಿಯನ್ನು ಪಡೆದಿರುವ ಈಕೆಯನ್ನು ಅನೇಕ ಸೆಲೆಬ್ರಿಟಿಗಳು ಕೂಡ ಭೇಟಿಯಾಗುತ್ತಿದ್ದಾರೆ.

Advertisement
Next Article