For the best experience, open
https://m.bcsuddi.com
on your mobile browser.
Advertisement

ಕಾರ್ಮಿಕರಿಗೆ ಗುಡ್ ನ್ಯೂಸ್ : ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡಲು ಸರ್ಕಾರ ಚಿಂತನೆ - 2025ರಿಂದ ಜಾರಿ ಸಾಧ್ಯತೆ

12:38 PM Mar 26, 2024 IST | Bcsuddi
ಕಾರ್ಮಿಕರಿಗೆ ಗುಡ್ ನ್ಯೂಸ್   ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡಲು ಸರ್ಕಾರ ಚಿಂತನೆ   2025ರಿಂದ ಜಾರಿ ಸಾಧ್ಯತೆ
Advertisement

ನವದೆಹಲಿ : ಕಾರ್ಮಿಕರಿಗೆ ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2025ರಿಂದ ಈ ವೇತನ ಬದಲಾವಣೆ ಜಾರಿಗೆ ತರುವ ಸಾಧ್ಯತೆ ಇದೆ.

ಜೀವನ ವೇತನ ಜಾರಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ತಾಂತ್ರಿಕ ಸಹಕಾರ ಪಡೆದು ರೂಪುರೇಷೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕನಿಷ್ಠ ವೇತನದಲ್ಲಿ ಕಾರ್ಮಿಕರ ಕೆಲಸ, ಉತ್ಪಾದಕತೆ, ಕೌಶಲ ಪರಿಗಣಿಸಿ ವೇತನ ನಿಗದಿ ಮಾಡಲಾಗುತ್ತದೆ. ಜೀವನ ವೇತನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

ವ್ಯಕ್ತಿಯ ಕನಿಷ್ಠ ಅಗತ್ಯ ಪೂರೈಸಿಕೊಳ್ಳುವಷ್ಟು ವೇತನ ನಿಗದಿಪಡಿಸಲಾಗುತ್ತದೆ. ಮನೆ ನಿರ್ವಹಣೆ, ಆಹಾರ, ಆರೋಗ್ಯ, ಶಿಕ್ಷಣ, ಬಟ್ಟೆ ಸೇರಿ ಕನಿಷ್ಠ ಅಗತ್ಯ ಪೂರೈಸಿಕೊಳ್ಳಲು ವ್ಯಕ್ತಿಗೆ ಕನಿಷ್ಠ ಆದಾಯ ಅತ್ಯಗತ್ಯವಾಗಿದ್ದು, ಇದಕ್ಕೆ ಅನುಗುಣವಾಗಿ ಜೀವನ ವೇತನ ನೀಡಬೇಕೆನ್ನುವುದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವಾದವಾಗಿದೆ. ಮಿನಿಮಮ್ ವೇಜ್ ಗಿಂತಲೂ ಲಿವಿಂಗ್ ವೇಜ್ ಹೆಚ್ಚಾಗಿರುತ್ತದೆ. ಇದರಿಂದ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

Advertisement

Author Image

Advertisement