For the best experience, open
https://m.bcsuddi.com
on your mobile browser.
Advertisement

'ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯವರಿಗೆ ಆಗುವುದಿಲ್ಲ': ಡಿಕೆಶಿ

10:28 AM Nov 09, 2023 IST | Bcsuddi
 ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯವರಿಗೆ ಆಗುವುದಿಲ್ಲ   ಡಿಕೆಶಿ
Advertisement

ನವದೆಹಲಿ: “ನಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯಿಂದ ಆಗುವುದಿಲ್ಲ. ಇದು ವಿಫಲ ಯತ್ನ ಎಂದು ಅವರಿಗೂ ಚನ್ನಾಗಿ ಗೊತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಮಾಧ್ಯಮಗಳ ಜತೆ ಮಾತನಾಸ್ಡಿದ ಅವರು,. ಆಪರೇಷನ್ ಕಮಲ ಮಾಡಲು ಬಿಜೆಪಿ ಸಜ್ಜಾಗುತ್ತಿದ್ದು, ಫಡ್ನವೀಸ್ ನೇತೃತ್ವದಲ್ಲಿ ಮಹರಾಷ್ಟ್ರದಲ್ಲಿ ಸಭೆ ನಡೆದಿದೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆಯಂತಲ್ಲ’ ಎಂದು ಕೇಳಿದ ಪ್ರಶ್ನೆಗೆ, “ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೇ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಅವರ ಪಕ್ಷದ, ನಾಯಕತ್ವದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅದನ್ನು ಹೊರಗೆ ಹೇಳಿಕೊಳ್ಳಲು ಆಗದೆ, ಇಂತಹ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿಯವರು ಯಾರೋ ಬಂದಂತೆ, ಹೋದಂತೆ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಕೆಲಸಗಳಿಗೆ, ಕುಶಲೋಪರಿ ವಿಚಾರಿಸಲು ಅನೇಕರು ಬಂದಿರುತ್ತಾರೆ. ಆದರೆ ಮನೆಯಿಂದ ಹೊರಗೆ ಬಂದು ರಾಜಕೀಯ ವಿಚಾರಕ್ಕೆ ಬಂದಿದ್ದೇ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಚಲಾವಣೆಯಲ್ಲಿ ಇರಬೇಕಾದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ” ಎಂದಿದ್ದಾರೆ

Advertisement

 ಬಿಜೆಪಿಯ ಎಲ್ಲಾ ನಡೆಯೂ ನನಗೆ ಗೊತ್ತಿದೆ:

ಸರ್ಕಾರ ಬೀಳಿಸುವ ಯತ್ನ ಮಹಾರಾಷ್ಟ್ರದಿಂದ ನಡೆದಿದೆ, ರಾಜ್ಯದ ನಾಯಕರು ಅಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆಯೇ ಎಂದು ಮರುಪ್ರಶ್ನಿಸಿದಾಗ, “ನೂರಾರು ಬೆಳವಣಿಗೆಗಳು ನಡೆಯುತ್ತವೆ. ಇದೆಲ್ಲವನ್ನು ಕಾಂಗ್ರೆಸ್ ಪಕ್ಷ ಅರಗಿಸಿಕೊಳ್ಳುತ್ತದೆ. ಇದರ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾಗಿದೆ. ನೂರು ಸಭೆ ಮಾಡಿರಲಿ, ಮಾಡದಿರಲಿ. ಅವರ ಎಲ್ಲಾ ನಡೆಯೂ ನನಗೆ ಗೊತ್ತಿದೆ. ಬಿಜೆಪಿಯ ನಾಯಕರು ತಮ್ಮದೇ ಕಷ್ಟದಲ್ಲಿದ್ದಾರೆ, ಒಂದಷ್ಟು ಜನ ನಿರುದ್ಯೋಗಿಗಳು ಇದ್ದಾರಲ್ಲಾ, ಅವರು ಚಪಲಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ

ಕಾಂಗ್ರೆಸ್ ಪಕ್ಷದ ಶಾಸಕರು ಈ ಸಭೆಗಳಲ್ಲಿ ಭಾಗವಹಿಸಿದ್ದಾರೆಯೇ ಎಂದು ಕೇಳಿದಾಗ “ನಮ್ಮ ಶಾಸಕರು ಯಾರೂ ಹೋಗಿಲ್ಲ. ಮೊದಲಿನಿಂದ ಏಜೆಂಟ್ ಕೆಲಸ ಮಾಡುತ್ತಿದ್ದವರು, ನಮ್ಮ ಶಾಸಕರನ್ನು ಸ್ವತಃ ಹುಡುಕಿಕೊಂಡು ಬಂದಿದ್ದಾರೆ. ಯಾರು, ಯಾರ ಬಳಿ ಬಂದು ಮಾತನಾಡಿದ್ದಾರೆ, ಅವರೆಲ್ಲಾ ನಮ್ಮ ಬಳಿ ಬಂದು ಮಾಹಿತಿ ನೀಡಿದ್ದಾರೆ. ನಮ್ಮಿಂದ ಹಿಂದೆ ಅಲ್ಲಿಗೆ ಹೋದವರೇ ಈ ಆಪರೇಷನ್ ಕೆಲಸ ಮಾಡುತ್ತಿರುವುದು” ಎಂದಿದ್ದಾರೆ

Author Image

Advertisement