For the best experience, open
https://m.bcsuddi.com
on your mobile browser.
Advertisement

ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾದ್ರಾ ಸಿಎಂ ಸಿದ್ದರಾಮಯ್ಯ.. ?

03:23 PM Sep 30, 2024 IST | BC Suddi
ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾದ್ರಾ ಸಿಎಂ ಸಿದ್ದರಾಮಯ್ಯ
Advertisement

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮೇಲೆ ಬಂದಿರುವ ಮುಡಾ ಹಗರಣ ರಾಜ್ಯ ರಾಜಕಾರಣ ದಿಕ್ಕು ಬದಲಿಸಲಿದ್ಯಾ ಎಂಬ ಚರ್ಚೆ ಶುರುವಾಗಿದೆ. ಅದ್ರಲ್ಲೂ ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಮೇಲೆ ತನಿಖೆ ನಡೆಸಲು ಕೋರ್ಟ್ ಆದೇಶ ಕೊಟ್ಟ ನಂತರ ವಿಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುತ್ತಿದೆ ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಯಾವ ನಿರ್ಧಾರ ತಗೆದುಕೊಳ್ಳಬೇಕು ಎಂಬ ಗೊಂದಲಿದೆ. ಯಾಕಂದ್ರೆ ಇತ್ತ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯುವಂಗೂ ಇಲ್ಲ ಆತ್ತ ಸಿಎಂ ಆಗಿ ಅಧಿಕಾರದಲ್ಲಿ ಮುಂದುವರೆಸುವಂಗೂ ಇಲ್ಲದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಕರ್ನಾಟಕ ಕಾಂಗ್ರೆಸನ ಪ್ರಶ್ನಾತೀತ, ಪ್ರಭಾವಿ, ಅಹಿಂದಾ ನಾಯಕ ಸಿಎಂ ಸಿದ್ದರಾಮಯ್ಯ ಇಷ್ಟು ಪವರ್ ಫುಲ್ ರಾಜಕಾರಣಿಯನ್ನ ಕೆಳಗಿಳಿಸಿದ್ರೆ ಅಹಿಂದಾ ಸಮುದಾಯ ಪಕ್ಷದ ವಿರುದ್ಧ ತಿರುಗಿಬೀಳೊ ಸಾಧ್ಯತೆ ಇದೆ ಅಲ್ದೇ ಸಿಎಂ ಬಣ ಪಕ್ಷದ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯೂ ತಳ್ಳಿಹಾಕುವಂತಿಲ್ಲ. ಇನ್ನೊಂದೆಡೆ ಸಿದ್ದರಾಮಯ್ಯರನ್ನ ಕೆಳಗಿಳಸದಿದ್ರೆ ವಿಪಕ್ಷಗಳಿಗೆ ಆಹಾರವಾಗುವ ಸಾಧ್ಯತೆ ಇದೆ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ಆರೋಪ ಮಾಡುತ್ತಾ ಪಕ್ಷಕ್ಕೆ ಮುಜುಗರ ಮಾಡುವ ಸಾಧ್ಯತೆ ಇರುತ್ತೆ. ಮುಂಬರುವ ನಾಲ್ಕೈದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷಗಳ ಇದೇ ಆಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹೊಡತ ಕೊಡಬಹುದು ಎಂಬ ಅಂತಕ ಕಾಂಗ್ರೆಸ ಪಕ್ಷಕ್ಕೆ ಇದೆ. ಮತ್ತೊಂದು ಕಡೆ ಸದ್ಯಕ್ಕಂತೂ ಮೂಡಾ ಕೇಸ್ ಮುಗಿಯುವ ಲಕ್ಷಣವಂತೂ ಕಾಣುತ್ತಿಲ್ಲ ೩ ತಿಂಗಳಲ್ಲಿ ತನಿಖೆಗೆ ಮುಗಿದ್ರೂ, ಕೇಸ್ ಅಂತಿಮ ಹಂತಕ್ಕೆ ಬರಲು ಕನಿಷ್ಟ 6 ರಿಂದ ‌8 ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ. ಹೆಚ್ಚು - ಕಡಿಮೆ ‌ಒಂದು ವರ್ಷಗಳ ವರೆಗೂ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಬಹುದು. ಈ ಪ್ರಕರಣದಿಂದ ಸಿದ್ದರಾಮಯ್ಯ ಹೊರಗಡೆ ಬರುವತನಕ ಸಿದ್ದರಾಮಯ್ಯನವರಿಗೆ ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷಕ್ಕೂ ಡ್ಯಾಮೇಜ್ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈಗ ಸಿದ್ದರಾಮಯ್ಯರನ್ನ ಕೆಳಗಿಳಿಸಿದ್ರೆ ಅದು ಬೇರೆಬೇರೆ ರಾಜ್ಯಗಳ ಚುನಾವಣೆ ಮೇಲೆ ಎಫೆಕ್ಟ್ ಬೀಳಬಹುದಾ ಎಂಬ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿದೆ. ಮುಖ್ಯವಾಗಿ ರಾಜ್ಯದ ಗಡಿ ಹಂಚಿಕೊಂಡಿರೊ ಮಹಾರಾಷ್ಟ್ರ ಚುನಾವಣೆ ಮೇಲೆ ಪ್ರಭಾವ ಬೀರುತ್ತೆ ಎಂಬುದು ಕೆಲ ಹಿರಿಯ ನಾಯಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕೈದು ರಾಜ್ಯಗಳ ವಿಧಾನಸಭಾ ಚುನಾವಣೆಯ ದೃಷ್ಟಿಕೋನದಲ್ಲಿಟ್ಟುಕೊಂಡು ಸಧ್ಯಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೆಲ ಹಿರಿಯ ನಾಯಕರನ್ನ ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯ ಸಂಗ್ರಹಿಸುತ್ತಿದೆ ಹೀಗಾಗಿ ಸಧ್ಯಕ್ಕೆ ಸಿಎಂ‌ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವವಾಗಿದ್ದಾರೆ.

Author Image

Advertisement