ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕದನ: ರಾಹುಲ್ ಗಾಂಧಿಗೆ ಪತ್ರ ಬರೆದ ಕೈ ಹಿರಿಯ ನಾಯಕರು

10:09 AM Sep 11, 2024 IST | BC Suddi
Advertisement

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಸಾಕ್ಷಿ ಹೈಕಮಾಂಡ್ ಗೆ ರಾಜ್ಯ ನಾಯಕರು ಬರೆಯುತ್ತಿರುವ ಪತ್ರ. ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣ ಸಂಬಂಧ ಕಾನೂನು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಸಿಎಂ ಕುರ್ಚಿ ಕದನ ಜೋರಾಗಿ ನಡೆಯುತ್ತಿದೆ. ನಾನು ಸಿಎಂ ಆಕಾಂಕ್ಷಿ ಎಂದು ಕೆಲ ಸಚಿವರ ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕಿ ಎಂದು ಎಐಸಿಸಿ ಅಧ್ಯಕ್ಷರಿಗೆ ಕೆಲ ಪರಿಷತ್ತ್ ಸದಸ್ಯರು ಪತ್ರ ಬರೆದ ಬೆನ್ನಲ್ಲೇ 15 ಕ್ಕೂ ಹೆಚ್ಚು ಕಾಂಗ್ರೆಸ್ ಹಿರಿಯ ನಾಯಕರು ಸಹ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.

Advertisement

ಪತ್ರದಲ್ಲಿ ಸಿಎಂ‌ ಕುರ್ಚಿ ಕದನದ ಬಗ್ಗೆ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ರಾಹುಲ್ ಗಾಂಧಿ ಬಳಿ ಮನವಿ ಮಾಡಿರುವ ಹಿರಿಯ ನಾಯಕರು. ನಾವು ಹೋರಾಡಬೇಕಾಗಿರುವುದು ಬಿಜೆಪಿ-JDS ವಿರುದ್ಧ, ಆದರೆ ಬಿಜೆಪಿ-JDS ವಿರುದ್ಧ ಹೋರಾಡುವುದನ್ನು ಮರೆತಿದ್ದಾರೆ. ಅದರ ಬದಲು ಸಚಿವರಿಂದ ಸಿಎಂ ಸ್ಥಾನದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.

ಇದರಿಂದ ಕಾರ್ಯಕರ್ತರು, ಜನರಿಗೆ ನಮ್ಮ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಹೋಗುತ್ತಿದೆ. ಕೂಡಲೇ ಸಚಿವರಿಗೆ ಸೂಚಿಸಿ ಗೊಂದಲಕಾರಿ ಹೇಳಿಕೆಗೆ ಕಡಿವಾಣ ಹಾಕಿ ಎಂದು ರಾಹುಲ್ ಗಾಂಧಿಗೆ ಹಿರಿಯ ನಾಯಕರಾದ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ರಾಣಿ ಸತೀಶ್, ವಿ.ಆರ್.ಸುದರ್ಶನ್, ಹೆಚ್ ಎಂ.ರೇವಣ್ಣ,, ಸಿ.ಎಸ್.ದ್ವಾರಕನಾಥ್, ಪಿ.ಆರ್.ರಮೇಶ್ ಸೇರಿದಂತೆ ಪ್ರಮುಖ ನಾಯಕರೇ ರಾಹುಲ್​ ಅವರಿಗೆ ಪತ್ರ ಬರೆದಿದ್ದಾರೆ.

ಒಂದುಕಡೆ ಸಚಿವರ ಬಹಿರಂಗ ಹೇಳಿಕೆಗಳು ಇನ್ನೊಂದು ಕಡೆ ಸಚಿವರ ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕಿ ಎಂದು ಹೈಕಮಾಂಡ್ ಗೆ ಪತ್ರ ಬರೆಯುತ್ತಿರುವ ಪರಿಷತ್ ಸದಸ್ಯರು ಮತ್ತು ಹಿರಿಯ ನಾಯಕರು ಮತ್ತೊಂದು ಕಡೆ ಸಿಎಂ ಮುಡಾ ಟೆನ್ಷನ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಕೆಪಿಸಿಸಿ ಅಧ್ಯಕ್ಷ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಇದೆಲ್ಲನೆಲ್ಲ ಗಮನಿಸಿದರೆ ರಾಜ್ಯ ಕಾಂಗ್ರೆಸ್ ನಲ್ಲಿ ಗೊಂದಲ ತಾರಕ್ಕಕ್ಕೆ ಏರುತ್ತಿದೆ ಅನ್ನಿಸುತ್ತೆ. ಇದಕ್ಕೆಲ್ಲ ಕಡಿವಾಣ ಬೀಳಬೇಕು ಎಂದರೆ ಮುಡಾ ಕೇಸ್ ಸಂಬಂಧ ನಡೆಯುತ್ತಿರುವ ವಿಚಾರಣೆ ಅಂತಿಮ ತೀರ್ಪು ಬರಬೇಕು ಅಷ್ಟೇ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article