For the best experience, open
https://m.bcsuddi.com
on your mobile browser.
Advertisement

ಕಳೆದ ಬಾರಿಯಂತೆ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿ‍ದೆ-ಪ್ರಶಾಂತ್ ಕಿಶೋರ್

11:17 AM May 22, 2024 IST | Bcsuddi
ಕಳೆದ ಬಾರಿಯಂತೆ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿ‍ದೆ ಪ್ರಶಾಂತ್ ಕಿಶೋರ್
Advertisement

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪಡೆದಷ್ಟು ಸೀಟ್‌ಗಳನ್ನು ಈ ಬಾರಿ ಪಡೆಯದಿದ್ದರೂ ಬಹುಮತದೊಂದಿಗೆ ಮೋದಿ ನೇತೃತ್ವದ ಸರಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬರಲಿದೆ ಎಂದು ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಎನ್‌ಡಿಟವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸಾಧನೆ ನನಗೆ ತೃಪ್ತಿ ತಂದಿಲ್ಲ ಎಂದಿದ್ದಾರೆ. ಈ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟ 2019ರಲ್ಲಿ ಪಡೆದಷ್ಟೇ ಸ್ಥಾನಗಳನ್ನು ಪಡೆಯಬಹುದು. ಅಥವಾ ಅದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಬಹುದು. ಈ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದು‌ ನಾನು ಭಾವಿಸುತ್ತೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಎನ್‌ಡಿಎ 370 ಸೀಟ್‌ಗಳನ್ನು ಗೆಲ್ಲುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಇದು ಚುನಾವಣೆಯ ಚರ್ಚೆಯನ್ನೇ ಬದಲಿಸಿದೆ‌. ಒಂದು ಕಂಪನಿಯಿಂದ ನಿರೀಕ್ಷೆಗಳು ಹೆಚ್ಚಾದಾಗ ಅದಕ್ಕಾಗಿ ಉತ್ತಮ ಕೆಲಸ ಕಾರ್ಯ ಮಾಡಿದರೂ ನಿರೀಕ್ಷೆಗಳನ್ನು ಪೂರೈಸದಿದ್ದಾಗ ಅದರ ಪರಿಣಾಮ ಷೇರು ಮಾರುಕಟ್ಟೆ ಮೇಲೆ ಗೋಚರಿಸುತ್ತದೆ. ಹಾಗೆಯೇ ಬಿಜೆಪಿ 370ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದರೆ ಅದು ವಿ‌ಷಯವಾಗಬಹುದು ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯ ಪಟ್ಟಿದ್ದಾರೆ

Advertisement
Author Image

Advertisement