ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕಲ್ಪನಾ ಮೃತಪಟ್ಟ ಐಬಿಯಲ್ಲಿ ಕಿಲ ಕಿಲ ನಗು, ಗೆಜ್ಜೆ ಸದ್ದು - ಆ ರಾತ್ರಿ ಭಯಾನಕ ಅನುಭವ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು

04:16 PM Sep 15, 2024 IST | BC Suddi
Advertisement

ಬೆಂಗಳೂರು: ಕನ್ನಡ ಚಿತ್ರರಂಗವನ್ನು ಮಿನುಗುತಾರೆ ಖ್ಯಾತಿಯ ಸ್ಟಾರ್ ನಟಿ ಮಿನುಗುತಾರೆ ಕಲ್ಪನಾ ಬೆಳಗಾವಿಯಲ್ಲಿ ಗೋಟೂರ್ ಪ್ರವಾಸ ಮಂದಿರ (ಐಬಿ)ನಲ್ಲಿ ಮೃತಪಟ್ಟಿದ್ದರು. ರಾಜಕಾರಣಿ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಕಲ್ಪನಾ ಅವರ ಅಭಿಮಾನಿ ಆಗಿದ್ದರು. ಆದರೆ, ಅವರ ಜೊತೆ ಸಿನಿಮಾ ಮಾಡೋಕೆ ಸಾಧ್ಯವಾಗಿರಲಿಲ್ಲ. ಆದಾಗ್ಯೂ ಮಿನುಗುತಾರೆ ಕಲ್ಪನಾ ಅವರನ್ನು ಕಾಡಿದ್ದರು. ಈ ರೀತಿಯ ಅನುಭವದ ಬಗ್ಗೆ ಅವರು ಈಗ ಹೇಳಿಕೊಂಡಿದ್ದಾರೆ. ಕೇವಲ 36 ವರ್ಷ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ್ರಾ ಕೊಲೆ ಆಯ್ತಾ ಏನ್ ಆಯ್ತು ಅನ್ನೋ ಉತ್ತರ ಯಾರಿಗೂ ಸಿಕ್ಕಿಲ್ಲ. ಆದರೆ ಕಲ್ಪನಾ ಅಗಲಿದ ಬಂಗಲೆಯಲ್ಲಿ ಇದುವರೆಗೂ ಯಾರೂ ವಾಸಿಸುತ್ತಿಲ್ಲ ಇದುವರೆಗೂ ಯಾರು ಒಂದು ಗಂಟೆಯೂ ಉಳಿದುಕೊಳ್ಳುವ ಧೈರ್ಯ ಮಾಡಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿರಲಿಲ್ಲ.  ನಿಜಕ್ಕೂ ಅಲ್ಲಿ ಭಯ ಮೂಡಿಸುವ ಘಟನೆ ನಡೆಯುತ್ತಾ ಎಂಬ ವಿಚಾರವನ್ನು ಮುಖ್ಯಮಂತ್ರಿ ಚಂದ್ರು 'ಕಲಾ ಮಾಧ್ಯಮ' ಯೂಟ್ಯೂಬ್ ಚಾನೆಲ್​ಗೆ ನೀಡಿದ್ದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

Advertisement

ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?

ಜನತಾ ಪಾರ್ಟಿಯಲ್ಲಿ ನಾನಿದ್ದೆ. ನಾನು ನಾಗಾರಾಜ್​ಮೂರ್ತಿ ಜೊತೆ ಕಾರು ತೆಗೆದುಕೊಂಡು ಬೆಳಗಾವಿಗೆ ಹೋಗಿದ್ದೆವು. ಬರುವಾಗ ಈ ಐಬಿ ತಲುಪಿದೆವು. ರಾತ್ರಿ 11.30 ಆಗಿತ್ತು. ಅಲ್ಲಿ ಹೆಚ್ಚು ಜನ ಬರುತ್ತಿರಲಿಲ್ಲ. ಅಲ್ಲಿ ದೂರದಲ್ಲಿ ಓರ್ವ ಬೀಡಿ ಸೇದುತ್ತಾ ಇದ್ದ. ನಾಗರಾಜ್ ಮೂರ್ತಿ ಅವರನ್ನು ಕರೆದ. ಅವನು ಬಂದು ನಮಸ್ಕಾರ ಮಾಡಿದ. ಬೀಗ ತೆಗಿ ಎಂದು ನಾಗಾರಾಜ ಮೂರ್ತಿ ಹೇಳಿದರು. ಅವನು ಒಂದಲ್ಲಾ ಒಂದು ಕಾರಣ ಕೊಡುತ್ತಾ ಇದ್ದಾ. 30 ಕಿ.ಮೀ ದೂರದಲ್ಲಿ ಬೇರೊಂದು ಐಬಿ ಅಲ್ಲಿಗೆ ಹೋಗಿ ಎಂದ. ಆದರೂ ಕೇಳದೆ ನಾವು ಹೋಗಿ ಅದೇ ಐಬಿಯಲ್ಲಿ ಮಲಗಿದೆವು. ಮಲಗಿ 20 ನಿಮಿಷ ಆಗಿರಬಹುದು. ಕಿಲ ಕಿಲ ನಗು. ನನ್ನ ಸುತ್ತವೇ ಯಾರೋ ನಕ್ಕಂತೆ ಆಗುತ್ತಿದೆ. ಕೆಟ್ಟ ನಗು ಅದು. ನಾನು ಎದ್ದೆ. ನಾಗಾರಾಜ ಮೂರ್ತಿ ಎದ್ದು ಕುಳಿತುಕೋ ಎಂದೆ. ಇಲ್ಲಿ ಬೇಡ ಎಂದೆ. ಆದರೆ ನಾಗರಾಜಮೂರ್ತಿ ಒಪ್ಪಲಿಲ್ಲ. 10 ನಿಮಿಷ ಬಿಟ್ಟು ನಾಗಾರಾಜ ಮೂರ್ತಿಗೆ ಗೆಜ್ಜೆ ಶಬ್ದ ಕೇಳಿತು. ಇಬ್ಬರಿಗೂ ಭಯ ಆಯಿತು. ನಂತರ ಅಲ್ಲಿಂದ ಓಡಿದೆವು. 'ಕಲ್ಪನಾ ಮತ್ತು ಮಂಜುಳಾಗೆ ಇಂಥ ಸಾವು ಬೇಕಿತ್ತಾ?'; ಮಿಂಚಿ ಮರೆಯಾದ ನಟಿಯರ ಬಗ್ಗೆ ರಾಜೇಶ್​ ವಿಷಾದದ ಮಾತು. ಅವರು ಸತ್ತಾಗಿನಿಂದ ಇಲ್ಲಿ ಸಮಸ್ಯೆ ಆಗ್ತಿದೆ. ಹೇಗೆ ಹೇಳಬೇಕು ಅನ್ನೋದು ಗೊತ್ತಾಗಿಲ್ಲ. ದಯವಿಟ್ಟು ಇಲ್ಲಿಂದ ಹೊರಟುಬಿಡಿ. ನಾನು ಹೋಗ್ತೀನಿ' ಎಂದು ಅಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿ ಹೇಳಿದ್ದರು. 'ಅದು ಭ್ರಮೆಯಲ್ಲಿ ಆಯ್ತೋ, ನಿಜವಾಗಿ ಆಯ್ತೋ ಗೊತ್ತಿಲ್ಲ. ನಮಗೆ ಆ ಅನುಭವ ಆಗಿದ್ದಂತೂ ಹೌದು' ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article