ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಕೀ – ಉತ್ತರ ವೆಬ್ ನಲ್ಲಿ ಪ್ರಕಟ.!

07:48 AM Jul 09, 2024 IST | Bcsuddi
Advertisement

ಬೆಂಗಳೂರು : ದಿನಾಂಕ:30/06/2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2024ರ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ-ಉತ್ತರಗಳನ್ನು ದಿನಾಂಕ:08/07/2024 ರಂದು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಕಟಿತ ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಬಗ್ಗೆ ಅಭ್ಯರ್ಥಿಗಳು ಕೆಳಕಂಡ ಸೂಚನೆಗಳನ್ನು ಪಾಲಿಸುವುದು.

Advertisement

  1. ಪತ್ರಿಕೆ-1 ಮತ್ತು ಪತ್ರಿಕೆ-2ಕ್ಕೆ ಸಂಬಂಧಿಸಿದಂತೆ ಪ್ರಕಟಿತ ಕೀ-ಉತ್ತರಗಳಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ದಿನಾಂಕ:13/07/2024 ರ ಸಂಜೆ 5.30 ರವರೆಗೆ ಅವಕಾಶ ಕಲ್ಪಿಸಿದೆ.
  2. ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಕೇವಲ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಆಕ್ಷೇಪಣೆ ಸಲ್ಲಿಸಿದಲ್ಲಿ, ಅವುಗಳನ್ನು ಪರಿಗಣಿಸಲಾಗುವುದಿಲ್ಲ.
  3. ಅಭ್ಯರ್ಥಿಗಳು ತಮ್ಮ ಅರ್ಜಿ/ ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸುವ ಮೂಲಕ https://schooleducation.karnataka.gov.in ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿದ ನಂತರ ಆಕ್ಷೇಪಣೆಗೆ ಸಂಬಂಧಿಸಿದ ವೆಬ್‌ಪೆಜ್ ತೆರೆದುಕೊಳ್ಳುತ್ತದೆ.
  4. ಅಭ್ಯರ್ಥಿಯು ಸಲ್ಲಿಸುವ ಆಕ್ಷೇಪಣೆಗಳೊಂದಿಗೆ ಅಧಿಕೃತ ಆಧಾರ/ ದಾಖಲೆಗಳನ್ನು ಸಲ್ಲಿಸುವುದು.
  5. ಸೂಕ್ತ ಆಧಾರ ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
  6. ಆಧಾರ ದಾಖಲೆಗಳು 500KB ಮೀರಬಾರದು.
  7. ವಿಷಯಕ್ಕೆ ಸಂಬಂಧಿಸದ ಅಸಂಬದ್ಧ ದಾಖಲೆಗಳನ್ನು ಹಾಗೂ ಚಿತ್ರಗಳನ್ನು ಅಪ್‌ಲೋಡ್ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.
  8. ಜರ್ನಲ್‌ಗಳು, ಮ್ಯಾಗಜಿನ್‌ಗಳು, ಸ್ವತಂತ್ರ ಪ್ರಕಾಶಕರುಗಳ ಪುಸ್ತಕಗಳು, ಗೈಡ್‌ಗಳು, ಇಂಟರ್‌ನೆಟ್ ಮೂಲಗಳು(ವಿಕಿಪೀಡಿಯಾ, ಗೂಗಲ್ ಮಾಹಿತಿ ಅಥವಾ ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿದ ಯಾವುದೇ ಮೂಲಗಳು) ವಿಡಿಯೋಗಳು, ದಿನಪತ್ರಿಕೆಯಲ್ಲಿನ ಲೇಖನಗಳನ್ನು ಆಧಾರ ದಾಖಲೆಗಳನ್ನಾಗಿ ಪರಿಗಣಿಸುವುದಿಲ್ಲ.
  9. ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ತಂಡವು ಪರಿಶೀಲಿಸಿ ನೀಡುವ ಅಂತಿಮ ಉತ್ತರವನ್ನು ಪರಿಗಣಿಸಲಾಗುವುದು. ತಜ್ಞರ ತಂಡವು ನೀಡುವ ಉತ್ತರವೇ ಅಂತಿಮವಾಗಿರುತ್ತದೆ.

 

Tags :
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಕೀ – ಉತ್ತರ ವೆಬ್ ನಲ್ಲಿ ಪ್ರಕಟ.!
Advertisement
Next Article