For the best experience, open
https://m.bcsuddi.com
on your mobile browser.
Advertisement

ಕರ್ನಾಟಕದಲ್ಲಿ 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯ ವಯೋಮಿತಿ: ಪೋಷಕರ ಆಕ್ರೋಶ

12:45 PM May 23, 2024 IST | Bcsuddi
ಕರ್ನಾಟಕದಲ್ಲಿ 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯ ವಯೋಮಿತಿ  ಪೋಷಕರ ಆಕ್ರೋಶ
Advertisement

ಒಂದನೇ ತರಗತಿ ಮತ್ತು ಎಲ್​ಕೆಜಿಗೆ ಕಡ್ಡಾಯ ವಯೋಮಿತಿ ನಿಗದಿಪಡಿಸಿರುವ ಸರ್ಕಾರದ ಕ್ರಮಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿದೆ. ಹೊಸ ನಿಯಮ ಅವೈಜ್ಞಾನಿಕ ಮತ್ತು ಅನ್ಯಾಯ ಎಂದು ಪೋಷಕರು ಕಿಡಿ ಕಾರಿದ್ದಾರೆ. ಈ ಮಧ್ಯೆ, ವಯೋಮಿತಿ ಸಡಿಲಿಕೆ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಂದನೇ ತರಗತಿ ಪ್ರವೇಶಾತಿಗೆ 2025-26ನೇ ಸಾಲಿನಿಂದ ಮಕ್ಕಳ ಕನಿಷ್ಠ ವಯೋಮಿತಿಯನ್ನು (Age limit) 6 ವರ್ಷಕ್ಕೆ ನಿಗದಿ ಮಾಡಿರುವುದು ಮತ್ತು ಎಲ್‌ಕೆಜಿಗೆ (LKG) ದಾಖಲಿಸಲು ಮಕ್ಕಳ ವಯಸ್ಸು ಜೂನ್ 1 ರೊಳಗೆ 4 ವರ್ಷ ಆಗಿರಬೇಕು (2023-24ರ ಶೈಕ್ಷಣಿಕ ವರ್ಷದಿಂದ) ಎಂಬ ನಿಯಮಕ್ಕೆ ಪೋಷಕರಿಂದ (Parents) ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೊಸ ನಿಯಮ ಅವೈಜ್ಞಾನಿಕ ಮತ್ತು ಅನ್ಯಾಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕಟ್ಟುನಿಟ್ಟಿನ ವಯೋಮಿತಿಗಳು ಮಕ್ಕಳನ್ನು ಸಕಾಲಿಕ ಶಿಕ್ಷಣದಿಂದ ವಂಚಿತಗೊಳಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಕೇವಲ ಒಂದು ದಿನದ ಅಂತರದಲ್ಲಿ ವಯಸ್ಸು ಪೂರ್ಣಗೊಂಡಿರದಿದ್ದರೆ ಅಂಥ ಮಕ್ಕಳಿಗೆ ಅನ್ಯಾಯವಾಗುತ್ತದೆ. ಅಂಥ ಮಕ್ಕಳು ಇಡೀ ವರ್ಷ ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಪೋಷಕರು ಹೇಳಿದ್ದು, ನಿಯಮದಲ್ಲಿ ಸಡಿಲಿಕೆಗೆ ಒತ್ತಾಯಿಸಿದ್ದಾರೆ.

ಗೊಂದಲಗಳ ಮಧ್ಯೆಯೂ ಇದೀಗ ಖಾಸಗಿ ಶಾಲೆಗಳು ಹೊಸ ನಿಯಮಗಳಿಗೆ ಬದ್ಧವಾಗಿದ್ದು, ವಯಸ್ಸು ಪೂರ್ಣಗೊಂಡಿರದ ಮಕ್ಕಳ ದಾಖಲಾತಿಗೆ ನಿರಾಕರಿಸುತ್ತಿವೆ. ಇದು ಅನೇಕ ಪೋಷಕರನ್ನು ನಿರಾಶೆಗೊಳಿಸಿದೆ.

Author Image

Advertisement