ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಒಂದೇ ರೀತಿಯ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಸಾಧ್ಯವಿಲ್ಲ ; ಸುಪ್ರೀಂ ಕೋರ್ಟ್

04:10 PM May 04, 2024 IST | Bcsuddi
Advertisement

ನವದೆಹಲಿ: ಒಂದೇ ರೀತಿಯ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಹೇರಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಇಂಥ ನಿಷೇಧ ಜನರ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Advertisement

ಮತದಾರರ ದಾರಿ ತಪ್ಪಿಸುವುದಕ್ಕೆಂದೇ ಪ್ರಮುಖ ಅಭ್ಯರ್ಥಿಗಳ ಹೆಸರು ಹೊಂದಿರುವರನ್ನೇ ರಾಜಕೀಯದ ತಂತ್ರವಾಗಿ ಚುನಾವಣೆಗೆ ನಿಲ್ಲಿಸಲಾಗುತ್ತದೆ. ಇದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಅಂತಹ ಅಭ್ಯರ್ಥಿಗಳು ಹೆಚ್ಚಾಗಿ ಸೋಲು ಕೂಡ ಅನುಭವಿಸಿದ್ದಾರೆ. ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಹಿನ್ನಡೆಯಾಗುತ್ತದೆ. ಹೀಗಾಗಿ ನ್ಯಾಯಯುತ ಚುನಾವಣೆ ದೃಷ್ಟಿಯಿಂದ ಅಂತಹ ತಂತ್ರಗಾರಿಕೆಯನ್ನು ನಿಷೇಧಿಸಬೇಕೆಂದು ಕೋರಿ ಸಾಬು ಸ್ಟೀಫನ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ರಾಜಕೀಯ ನಾಯಕರ ಹೆಸರನ್ನು ಹೊಂದಿರುವ ಇತರರನ್ನು ಚುನಾವಣೆಗೆ ಸ್ಪರ್ಧೆ ಮಾಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ. ಪೋಷಕರು ರಾಜಕೀಯ ನಾಯಕರ ಹೆಸರನ್ನು ಇಟ್ಟಿದ್ದರೆ ಅದನ್ನು ತಡೆಯುವುದು ಹೇಗೆ?  ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್ ಅಂತಹ ಹೆಸರನ್ನು ಬೇರೆ ಯಾರಿಗೂ ಇಡಬಾರದಾ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ. ಅಲ್ಲದೇ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಅರ್ಜಿದಾರರಿಗೆ ಸೂಚಿಸಿದೆ.

Advertisement
Next Article