For the best experience, open
https://m.bcsuddi.com
on your mobile browser.
Advertisement

ಒಂದೇ ಆಸ್ತಿ ಒತ್ತೆ ಇಟ್ಟು 22 ಬ್ಯಾಂಕುಗಳಲ್ಲಿ ಸಾಲ.! ದಂಪತಿ ಸೇರಿ 6 ಮಂದಿ ಅರೆಸ್ಟ್.!

07:57 AM Apr 20, 2024 IST | Bcsuddi
ಒಂದೇ ಆಸ್ತಿ ಒತ್ತೆ ಇಟ್ಟು 22 ಬ್ಯಾಂಕುಗಳಲ್ಲಿ ಸಾಲ   ದಂಪತಿ ಸೇರಿ 6 ಮಂದಿ ಅರೆಸ್ಟ್
Advertisement

ಬೆಂಗಳೂರು: ಒಂದೇ ಆಸ್ತಿಯನ್ನು ಒತ್ತೆ ಇಟ್ಟು 22 ಬ್ಯಾಂಕುಗಳಲ್ಲಿ ಪಡೆದುಕೊಂಡು 10 ಕೋಟಿ ರೂ.ಗೂ ಅಧಿಕ ಹಣ ವಂಚಿನ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದೇ ಆಸ್ತಿಗೆ ಹತ್ತಾರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು, 22 ಬ್ಯಾಂಕಗಳಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದುಕೊಳ್ಳಲಾಗಿದೆ. ಈ ರೀತಿ ವಂಚಿಸಿದ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತರು, ನಾಗೇಶ್ ಭಾರದ್ವಾಜ್, ಆತನ ಪತ್ನಿ ಸುಮಾ ಸಂಬಂಧಿಕರಾದ ಶೋಭಾ, ಶೇಷಗಿರಿ, ಸತೀಶ, ಸುಮಾ ಸ್ನೇಹಿತೆ ವೇದಾ ಬಂಧಿತರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು, ಬೇಗೂರು ಗ್ರಾಮದಲ್ಲಿ ನಾಗೇಶ್ ಮತ್ತು ಸುಮಾ ದಂಪತಿ ಹೆಸರಿನಲ್ಲಿ 2100 ಚದರಡಿ ಜಾಗವಿದ್ದು, ಕಟ್ಟಡ ದಾಖಲೆಯಲ್ಲಿ ವಿವಿಧ ಸರ್ವೇ ನಂಬರ್, ವಿವಿಧ ನಿವೇಶನಗಳ ನಂಬರ್ ಗಳನ್ನು ನಮೂದಿಸುತ್ತಿದ್ದರು. ಸೈಟ್ ಉದ್ದಳತೆಯನ್ನು ಬದಲಾಯಿಸಿದ್ದರು. ನಂತರ ನಕಲಿ ದಾಖಲಾತಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುತ್ತಿದ್ದರು. ಅವುಗಳ ಆಧಾರದ ಮೇಲೆ ವಿವಿಧ ರಾಷ್ಟ್ರೀಕೃತ ಬ್ಯಾಂಕು, ಸಹಕಾರಿ ಬ್ಯಾಂಕು, ಕೋ ಆಪರೇಟಿವ್ ಬ್ಯಾಂಕುಗಳು ಸೇರಿ ಒಟ್ಟು 22 ಬ್ಯಾಂಕ್ ಗಳಲ್ಲಿ 10 ಕೋಟಿ ರೂ.ಗೂ ಅಧಿಕ ಸಾಲ ಪಡೆದುಕೊಂಡಿದ್ದಾರೆ.

ಜಯನಗರ ಎರಡನೇ ಬ್ಲಾಕ್ ನಲ್ಲಿರುವ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ನಾಗೇಶ್ ನಿವೇಶನ, ಕಟ್ಟಡದ ನಕಲಿ ದಾಖಲೆ ಆಧಾರದಲ್ಲಿ ಸಾಲ, ಯಂತ್ರೋಪಕರಣಕ್ಕೆ 1.30 ಕೋಟಿ ಸಾಲ ಪಡೆದುಕೊಂಡಿದ್ದರು. ಹಣವನ್ನು ಬ್ಯಾಂಕಿಗೆ ಮರು ಪಾವತಿಸದೆ ವಂಚಿಸಿದ್ದರು. ಬ್ಯಾಂಕಿನ ಮ್ಯಾನೇಜರ್ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಕಲಿ ದಾಖಲೆ ಸೃಷ್ಟಿಸಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ. ಇವರು ನೀಡಿದ ಮಾಹಿತಿ ಆಧರಿಸಿ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ.

Tags :
Author Image

Advertisement