ಒಂದು ಮೊಬೈಲ್ ನಂಬರ್ ನ ಎಷ್ಟು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬಹುದು ತಿಳಿದಿದಿಯಾ..?
ಈಗ ಚಿಕ್ಕ ಮಕ್ಕಳಿಗೂ ಆಧಾರ್ ಕಾರ್ಡ್ (Aadhaar Card) ನೀಡಲಾಗುತ್ತದೆ. ವಯಸ್ಕರಿಗೆ ಪ್ರತ್ಯೇಕ ಮೊಬೈಲ್ ಫೋನ್ ಇದೆ, ಆದರೆ ಮಕ್ಕಳಿಗೆ ಮೊಬೈಲ್ ಫೋನ್ ಇಲ್ಲದಿದ್ದಾಗ, ಅವರ ಪೋಷಕರ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ನೀಡಲಾಗುತ್ತದೆ. ಅದೇ ರೀತಿ ಮನೆಯಲ್ಲಿ ಮೊಬೈಲ್ ಬಳಸಲಾಗದ ವಯೋವೃದ್ಧರು ಇದ್ದರೆ ಅವರ ಆಧಾರ್ ಅನ್ನು ಕೂಡ ಫೋನ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಹಾಗಾಗಿ ಇಂದು ನಾವು ಒಂದು ಸಿಮ್ ನಂಬರ್‌ನಲ್ಲಿ ಎಷ್ಟು ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡಬಹುದು ಎಂದು ನಿಮಗೆ ತಿಳಿಸಲಿದ್ದೇವೆ.
ನೀವು ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ನೀವು ಆ ಮೊಬೈಲ್ ಸಂಖ್ಯೆಯನ್ನು ನೀಡಬಹುದು. ಅದೂ ಅಲ್ಲದೆ ಎರಡಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಲಿಂಕ್ ಮಾಡಲು ಒಂದು ನಂಬರ್ ನೀಡಿದರೆ ಒಟಿಪಿ ಅಥವಾ ಇತರೆ ಪ್ರಕರಣಗಳಲ್ಲಿ ಯಾವ ಆಧಾರ್ ಕಾರ್ಡ್ ಗೆ ಮಾಹಿತಿ ಬಂದಿದೆ ಎಂಬ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ನೀವು ಅಗತ್ಯವಿದ್ದಾಗ ಮಾತ್ರ ನಿಮ್ಮ ಆಧಾರ್ ಅನ್ನು ಮತ್ತೊಂದು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು.