ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಐಸಿಸ್ ನ ಭಯೋತ್ಪಾದಕ ನಿಯತಕಾಲಿಕೆ ಖುರಾಸನ್​ನಲ್ಲಿ ಭಾರತಕ್ಕೆ ಬೆದರಿಕೆ

09:47 AM Feb 02, 2024 IST | Bcsuddi
Advertisement

ನವದೆಹಲಿ: ಭಯೋತ್ಪಾದಕ ಸಂಘಟನೆ ಐಸಿಸ್ ತನ್ನ ನಿಯತಕಾಲಿಕೆ ’ವಾಯ್ಸ್​ ಆಫ್ ಖುರಾಸನ್’ ನಲ್ಲಿ ಭಾರತಕ್ಕೆ ಬೆದರಿಕೆಯೊಡ್ಡಿದೆ.

Advertisement

ಐಸಿಸ್ ತನ್ನ ನಿಯತಕಾಲಿಕೆ ‘ವಾಯ್ಸ್ ಆಫ್ ಖುರಾಸನ್ 32 ನೇ ಆವೃತ್ತಿಯಲ್ಲಿ ಹಿಂದೂಗಳಿಗೆ ಹಾಗೂ ಭಾರತ ಸರ್ಕಾರಕ್ಕೆ ದೇಶದಲ್ಲಿ ಹತ್ಯಾಕಾಂಡ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ವಾಯ್ಸ್ ಆಫ್ ಖುರಾಸನ್ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಆನ್‌ಲೈನ್ ನಿಯತಕಾಲಿಕೆಯಾಗಿದ್ದು, ಇದರ 32 ನೇ ಸಂಚಿಕೆಯು ಹಲವಾರು ಸಾಮಾಜಿಕ ಮಾಧ್ಯಮ ಮತ್ತು ಡಾರ್ಕ್ ವೆಬ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ಪ್ರಸಾರ ಮಾಡಲಾಗಿದೆ.

ಈ ಆವೃತ್ತಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದೆ. ಬಾಬ್ರಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ, 2002 ರಲ್ಲಿ ನಡೆದ ಗುಜರಾತ್ ಗಲಭೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಕಳವಳವನ್ನು ಉಲ್ಲೇಖ ಮಾಡಿ ಅದರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ. ಶ್ರೀನಗರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಲ್ಲಿ ಹಿಂದೂ ವಿದ್ಯಾರ್ಥಿಯೊಬ್ಬರು ಹಮಾಸ್ ನಾಯಕನ ಮಗ ಪ್ರವಾದಿ ಮುಹಮ್ಮದ್ ಅವರನ್ನು ಟೀಕಿಸಿದ ಘಟನೆಗೆ ಸಂಬಂಧಿಸಿದಂತೆ ’ನಾನು ಅವನನ್ನು ಕೊಲ್ಲಬೇಕೆಂದು ನೀವು ಬಯಸುತ್ತೀರಾ?’ ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ಈ ಆವೃತ್ತಿಯಲ್ಲಿ ಬರೆಯಲಾಗಿದೆ.

Advertisement
Next Article