For the best experience, open
https://m.bcsuddi.com
on your mobile browser.
Advertisement

--ಏಲೇಶ್ವರ ಕೇತಯ್ಯ ಅವರ ವಚನ .!

07:44 AM May 08, 2024 IST | Bcsuddi
  ಏಲೇಶ್ವರ ಕೇತಯ್ಯ ಅವರ ವಚನ
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

Advertisement

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,

ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,

ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,

ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,

ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.

ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ [ನಿಜ]ಶರಣನು.

-ಅಂಬಿಗರ ಚೌಡಯ್ಯ ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ,

ಅದು ಸ್ವಯಂಭು ಹೇಮವಪ್ಪುದೆ?

ಹೆಣ್ಣು ಹೊನ್ನು ಮಣ್ಣು ಕುರಿತು

ಕುಜಾತಿಗನ್ನಕ್ಕೆ ಶೀಲವಂತನಾದವ

ನನ್ನಿಯ ವ್ರತದ ದೆಸೆಯ ಬಲ್ಲನೆ?

ಇಂತೀ ಗನ್ನರನರಿದು, ಇಂತೀ ನಿಜಪ್ರಸನ್ನರ ಕಂಡು,

ಉಭಯದ ಬಿನ್ನಾಣದ ವ್ರತದ ಬೆಸುಗೆಯ

ತ್ರಿಕರಣಕ್ಕೆ ಅನ್ಯವಿಲ್ಲದೆ ಮಾಡಬೇಕು.ಏಲೇಶ್ವರಲಿಂಗಕ್ಕೆ ವ್ರತಕ್ಕೆ ಆಚಾರ್ಯನಾಗಬಲ್ಲಡೆ.

-ಏಲೇಶ್ವರ ಕೇತಯ್ಯ

Tags :
Author Image

Advertisement