For the best experience, open
https://m.bcsuddi.com
on your mobile browser.
Advertisement

ಏಪ್ರಿಲ್ 1ರಿಂದ ಎಸ್‌ಬಿಐ ಡೆಬಿಟ್ ಕಾರ್ಡ್‌ ಮತ್ತಷ್ಟು ದುಬಾರಿ.! - ನಿರ್ವಹಣಾ ಶುಲ್ಕ 75 ರೂ ಹೆಚ್ಚಳ

03:22 PM Mar 28, 2024 IST | Bcsuddi
ಏಪ್ರಿಲ್ 1ರಿಂದ ಎಸ್‌ಬಿಐ ಡೆಬಿಟ್ ಕಾರ್ಡ್‌ ಮತ್ತಷ್ಟು ದುಬಾರಿ     ನಿರ್ವಹಣಾ ಶುಲ್ಕ 75 ರೂ ಹೆಚ್ಚಳ
Advertisement

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲವು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣಾ ಶುಲ್ಕವನ್ನು 75 ರೂಪಾಯಿ ಹೆಚ್ಚಿಸುತ್ತಿರುವುದಾಗಿ ಘೋಷಿಸಿದೆ.

ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಹೆಚ್ಚಳ ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ವಾರ್ಷಿಕ ನಿರ್ವಹಣಾ ಶುಲ್ಕಗಳ ಜೊತೆಗೆ, SBI ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ವಿವರಿಸಿದೆ.

ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಮತ್ತು ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳಿಗೆ 300 ರೂಪಾಯಿ ತನಕ ಮತ್ತು ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳಿಗೆ GST ವರೆಗೆ ಕಾರ್ಡ್‌ನ ಪ್ರಕಾರವನ್ನು ಅವಲಂಬಿಸಿ ವಿತರಣಾ ಶುಲ್ಕಗಳು ಬದಲಾಗುತ್ತವೆ ಎಂದು ಎಸ್‌ಬಿಐ ತಿಳಿಸಿದೆ. ಎಸ್‌ಬಿಐ ಡೆಬಿಡ್‌ ಕಾರ್ಡ್‌ಗಳ ಪರಿಷ್ಕೃತ ಶುಲ್ಕ ಹೀಗಿದೆ ನೋಡಿ

Advertisement

* ಕ್ಲಾಸಿಕ್, ಸಿಲ್ವರ್, ಗ್ಲೋಬರ್, ಕಾಂಟ್ಯಾಕ್ಟ್‌ಲೆಸ್‌ ಎಸ್‌ಬಿಐ ಡೆಬಿಟ್‌ ಕಾರ್ಡ್ ಮಾದರಿಗಳಿಗೆ ಸದ್ಯ ಚಾಲ್ತಿಯಲ್ಲಿರುವ ಶುಲ್ಕ 125 + ಜಿಎಸ್‌ಟಿ ಆಗಿದೆ. ಏಪ್ರಿಲ್ 1ರಿಂದ 200+ ಜಿಎಸ್‌ಟಿ ಶುಲ್ಕ ನಿಗದಿಯಾಗಲಿದೆ.

* ಯುವ, ಗೋಲ್ಡ್, ಕಾಂಬೊ ಡೆಬಿಟ್ ಕಾರ್ಡ್, ಮೈ ಕಾರ್ಡ್‌ ಎಸ್‌ಬಿಐ ಡೆಬಿಟ್‌ ಕಾರ್ಡ್ ಮಾದರಿಗಳಿಗೆ ಸದ್ಯ ಚಾಲ್ತಿಯಲ್ಲಿರುವ ಶುಲ್ಕ 175 + ಜಿಎಸ್‌ಟಿ ಆಗಿದೆ. ಏಪ್ರಿಲ್ 1ರಿಂದ 250 + ಜಿಎಸ್‌ಟಿ ಶುಲ್ಕ ನಿಗದಿಯಾಗಲಿದೆ.

* ಪ್ಲಾಟಿನಂ ಡೆಬಿಟ್ ಕಾರ್ಡ್‌ (ಎಸ್‌ಬಿಐ ಡೆಬಿಟ್‌ ಕಾರ್ಡ್) ಮಾದರಿಗಳಿಗೆ ಸದ್ಯ ಚಾಲ್ತಿಯಲ್ಲಿರುವ ಶುಲ್ಕ 250+ ಜಿಎಸ್‌ಟಿ ಆಗಿದೆ. ಏಪ್ರಿಲ್ 1ರಿಂದ 325 + ಜಿಎಸ್‌ಟಿ ಶುಲ್ಕ ನಿಗದಿಯಾಗಲಿದೆ.

* ಪ್ರೈಡ್/ ಪ್ರೀಮಿಯಂಬಿಜಿನೆಸ್‌ ಡೆಬಿಟ್‌ ಕಾರ್ಡ್‌ ಮಾದರಿಗಳಿಗೆ ಸದ್ಯ ಚಾಲ್ತಿಯಲ್ಲಿರುವ ಶುಲ್ಕ 350 + ಜಿಎಸ್‌ಟಿ ಆಗಿದೆ. ಏಪ್ರಿಲ್ 1ರಿಂದ 425 + ಜಿಎಸ್‌ಟಿ ಶುಲ್ಕ ನಿಗದಿಯಾಗಲಿದೆ.

Author Image

Advertisement