ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಏನಿದು ಲಕ್ ಪತಿ ಯೋಜನೆ..? ಯಾರಿಗೆ ಅನುಕೂಲವಾಗಲಿದೆ..? ಇಲ್ಲಿದೆ ಓದಿ

04:43 PM Feb 01, 2024 IST | Bcsuddi
Advertisement

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್‌ನಲ್ಲಿ ಮಂಡಿಸಿದ ಪ್ರಸಕ್ತ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಇರುವ "ಲಕ್ ಪತಿ ದೀದಿ ಯೋಜನೆ"ಯೊಂದನ್ನು ಪ್ರಸ್ತಾಪಿಸಿದ್ದಾರೆ. ಹಾಗಾದರೆ ಏನಿದು ಲಕ್ ಪತಿ ದೀದಿ? ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ. ದೇಶದಲ್ಲಿ ವಾಸಿಸುವ ಬಡ ಮತ್ತು ಬಡತನದ ರೇಖೆಗಿಂತಲೂ ಕೆಳಗಿರುವ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದು, ಇದರ ವ್ಯಾಪ್ತಿಗೆ ಬರುವ ದೇಶದ ಮೂರು ಕೋಟಿಯಷ್ಟು ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ದೇಶದಲ್ಲಿ 83 ಲಕ್ಷಕ್ಕೂ ಅಧಿಕ ಮಹಿಳಾ ಸ್ವ-ಸಹಾಯ ಗುಂಪುಗಳಿವೆ. ಇಂಥ ಗುಂಪುಗಳೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸುಮಾರು ಒಂಬತ್ತು ಕೋಟಿ ಮಹಿಳೆಯರು ಒಡನಾಟವನ್ನು ಹೊಂದಿದ್ದಾರೆ. ಇನ್ನು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮೂಲ ಕಾರಣವೇ ಆರ್ಥಿಕ ತೊಂದರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಸ್ವ-ಸಹಾಯ ಸಂಘಗಳ ಮೂಲಕ ಅದರ ಸದಸ್ಯ ಮಹಿಳೆಯರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಕೌಶಲ್ಯಕ್ಕೆ ತಕ್ಕಂತೆ ಅವರಿಗೆ ಸೂಕ್ತ ತರಬೇತಿ ನೀಡುವುದು. ಅದಕ್ಕಾಗಿ ಒಂದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸುವುದಾಗಿದೆ. ಆದರೆ, "ಲಕ್ ಪತಿ ದೀದಿ" ಯೋಜನೆಯ ಲಾಭ ಪಡೆಯಬೇಕೆಂದರೆ ಅರ್ಹ ಪಲಾನುಭವಿಯ ವಾರ್ಷಿಕ ಆದಾಯ ಮಾತ್ರ ಒಂದು ಲಕ್ಷ ಮೀರಿರಬಾರದು ಅಂತಾ ಹೇಳಲಾಗುತ್ತೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲೂ ಇದನ್ನೇ ವಿವರಿಸಿದ್ದಾರೆ.

Advertisement

Advertisement
Next Article