ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಎರಡು ರೋಲ್ಸ್‌ ರಾಯ್ಸ್‌, 10 ಮರ್ಸಿಡಿಸ್‌ ಕಾರುಗಳಿಗೆ ಸಮ ಈ ಕೋಣದ ಬೆಲೆ! | ಅಬ್ಬಬ್ಬಾ… ಇದರ ಬೆಲೆ ಎಷ್ಟು ಕೋಟಿ ಗೊತ್ತಾ?

12:11 PM Oct 20, 2024 IST | BC Suddi
Advertisement

ಮೀರತ್​ನ ಸರ್ದಾರ್ ವಲ್ಲಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಮೂರು ದಿನದ ರೈತರ ಮೇಳ ಹಾಗೂ ಕೃಷಿ ಮೇಳದಲ್ಲಿ ನೆರೆದಿದ್ದ ಎಲ್ಲರ ದೃಷ್ಟಿ ತಾಗುವ ಹಾಗೆ ಕಂಡಿದ್ದು ಅನ್ಮೋಲ್ ಎಂಬ ಒಂದು ಕೋಣ. ಕೃಷಿ ಮೇಳದಲ್ಲಿ ಪ್ರದರ್ಶನದಲ್ಲಿ ಭಾಗಿಯಾದ ಅನ್ಮೋಲ್ ಎಂಬ ಕೋಣ ಎಲ್ಲರ ದೃಷ್ಟಿ ಕೇಂದ್ರವಾಗಿತ್ತು. ಕಾರಣ ಅದರ ಬೆಲೆ.
ಹರಿಯಾಣದ ಸಿರ್ಸಾದಿಂದ ಬಂದಿದ್ದ ಈ ಕೋಣದ ಬೆಲೆ 2 ರೋಲ್ಸ್ ರಾಯ್ಸ್ ಹಾಗೂ 10 ಮರ್ಸಿಡಿಸ್ ಬೆಂಜ್​ ಕಾರುಗಳು ಸೇರಿದರೆ ಎಷ್ಟು ಬೆಲೆಯಾಗುತ್ತದೆಯೋ ಅಷ್ಟು ಎನ್ನಲಾಗುತ್ತಿದೆ. ಅಷ್ಟು ಮಾತ್ರವಲ್ಲ ಈ ಒಂದು ಕೋಣಕ್ಕೆ ನೀಡುವ ದುಡ್ಡಿನಲ್ಲಿ ನೋಯ್ಡಾದಲ್ಲಿ ಸುಮಾರು 20 ಐಷಾರಾಮಿ ಮನೆಗಳನ್ನು ಖರೀದಿ ಮಾಡಬಹುದು ಎನ್ನಲಾಗುತ್ತಿದೆ. ಅನೇಕ ಜಿಲ್ಲೆಗಳಿಂದ ಬಂದಿದ್ದ ಜನರು ಈ ಅದ್ಭುತ ಕೋಣವನ್ನು ನೋಡಲು ಹಾಗೂ ಅದರ ಬೆಲೆ ತಿಳಿಯಲು ಹಿಂಡು ಹಿಂಡಾಗಿ ಬರುತ್ತಿದ್ದರು.
ಈ ಒಂದು ಕೋಣದ ಬೆಲೆ ಒಂದಲ್ಲ ಎರಡಲ್ಲ ಬರೋಬ್ಬರಿ 23 ಕೋಟಿ ಎಂದು ಹೇಳಲಾಗುತ್ತಿದೆ. ಇದು 2 ರೋಲ್ಸ್ ರಾಯ್ಸ್ 12 ಕೋಟಿ ಮತ್ತು 10 ಮರ್ಸಿಡಿಸ್​ ಬೆಂಜ್ ಕಾರು 15 ಕೋಟಿ ಎರಡು ಸೇರಿಸಿದರೆ 27 ಕೋಟಿ ರೂಪಾಯಿ ಆಗುತ್ತದೆ. ಈ ಕೋಣದ ಬೆಲೆಯೂ ಕೂಡ ಹತ್ತಿರತ್ತ ಅಲ್ಲಿಗೆ ಬಂದಂತಾಯ್ತು. ಈ ಕೋಣವನ್ನು ನೋಡಲು ಜನರು ಕೃಷಿ ಮೇಳದಲ್ಲಿ ಇದೇ ಕಾರಣದಿಂದ ನೋಡಲು ಮುಗಿಬಿದ್ದಿದ್ದರು.
ಈ ಅನ್ಮೋಲ್ ಎಂಬ ಕೋಣದ ಮಾಲೀಕ ಜಗತ್ ಸಿಂಗ್ ಮೂಲತಃ ಹರಿಯಾಣದವರು. ಅವರು ಹೇಳುವ ಪ್ರಕಾರ ಎಂಟು ವರ್ಷದ ಈ ಕೋಣ ಅನೇಕ ಪ್ರಶಸ್ತಿಗಳನ್ನು ಗಳಿಸಿದಕೊಂಡಿದೆ.
ಇದನ್ನು ಇಷ್ಟು ಆರೋಗ್ಯಕರವಾಗಿ ಸದೃಢವಾಗಿ ಇಡಲು ಅದಕ್ಕೆ ನೀಡುವ ಆಹಾರವೇ ಕಾರಣ ಎನ್ನುತ್ತಾರೆ ಜಗತ್ ಸಿಂಗ್. ನಿತ್ಯ ಈ ಕೋಣಕ್ಕೆ 5 ಲೀಟರ್ ಹಾಲು, 4 ಕೆಜಿ ದಾಳಿಂಬೆ, 30 ಬಾಳೆಹಣ್ಣು, 20 ರಿಚ್ ಪ್ರೊಟೀನ್ ಇರುವ ಮೊಟ್ಟೆ ಹಾಗೂ ಮೇವು ಕೊಡುತ್ತೇವೆ. ಇದರ ಜೊತೆಗೆ ಕಾಲ್ ಕೆಜಿ ಬಾದಾಮಿಯನ್ನು ಗುಲ್ಕಂದ್ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಇದರ ವಿರ್ಯಕ್ಕೂ ಕೂಡ ಭಾರೀ ಡಿಮ್ಯಾಂಡ್ ಇದೆಯಂತೆ. ತಿಂಗಳಿಗೆ ನಾಲ್ಕರಿಂದ ಐದು ಲಕ್ಷ ರೂಪಾಯಿವರೆಗೆ ಅದರಿಂದಲೇ ಗಳಿಸುತ್ತೇವೆ ಎಂದು ಜಗತ್ ಸಿಂಗ್ ಹೇಳಿದ್ದಾರೆ. ಸಿರ್ಸಾದಿಂದ ಆಗಾಗ ಒಂದು ಟೀಮ್ ಬಂದು ಈ ಕೋಣದ ವಿರ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಹಾಗೂ ಎಲ್ಲಾ ಕಡೆ ಹಂಚುತ್ತಾರೆ. ಅನ್ಮೋಲ್ ಮುರಾಽ ಎಂಬ ತಳಿಗೆ ಸೇರಿದ ಕೋಣ. ಇದರ ವಿರ್ಯವು ಸಿಗುವುದು ಬಹಳ ಅಪರೂಪ, ಪ್ರತಿ ತಿಂಗಳಿಗೆ ಈ ಕೋಣಕ್ಕಾಗಿ 60 ಸಾವಿರ ರೂಪಾಯಿ ಖರ್ಚು ಮಾಡುತ್ತೇವೆ ಹಾಗೂ 4 ರಿಂದ 5 ಲಕ್ಷ ರೂಪಾಯಿ ಗಳಿಸುತ್ತೇವೆ ಎಂದು ಮಾಲೀಕ ಜಗತ್ ಸಿಂಗ್ ಹೇಳುತ್ತಾರೆ.

Advertisement

Advertisement
Next Article